Publish Date: Fri, 28 Jan 2022 (11:05 IST)
Updated Date: Fri, 28 Jan 2022 (09:50 IST)
ಚಿತ್ರದುರ್ಗ: ಪತಿಯನ್ನು ಬಿಟ್ಟು ಪರ ಪುರುಷನೊಂದಿಗೆ ಓಡಿ ಹೋಗಿದ್ದ ವಿವಾಹಿತ ಮಹಿಳೆ ಅಸಹಜವಾಗಿ ಸಾವನ್ನಪ್ಪಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
22 ವರ್ಷದ ಯುವತಿ ಸಾವನ್ನಪ್ಪಿದ್ದವಳು. ಕೆಲವು ದಿನಗಳ ಹಿಂದೆ ಈಕೆ ಪ್ರಿಯಕರನ ಜೊತೆ ಓಡಿ ಹೋಗಿ ಬೇರೊಂದು ಮನೆಯಲ್ಲಿ ವಾಸವಾಗಿದ್ದಳು. ಆದರೆ ಈಗ ಸಾವನ್ನಪ್ಪಿದ್ದು, ಆಕೆಯ ಮೈಮೇಲೆ ಪರಚಿದ ಗಾಯಗಳಿವೆ. ಜ್ವರದಿಂದ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.
ಹಾಗಿದ್ದರೂ ಮೈಮೇಲಿರುವ ಗಾಯ ಬೇರೆಯೇ ಕತೆ ಹೇಳುತ್ತಿದೆ. ಇನ್ನೊಂದೆಡೆ ಪ್ರಿಯಕರನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಸಾವಿನ ಬಗ್ಗೆ ಯುವತಿಯ ಮನೆಯವರು ಅನುಮಾನ ವ್ಯಕ್ತಪಡಿಸಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.