ಅಹಮ್ಮದಾಬಾದ್: ಮೊದಲ ರಾತ್ರಿ ಬಗ್ಗೆ ನವದಂಪತಿಗಳಿಗೆ ಏನೇನೋ ಕನಸುಗಳಿರುವುದು ಸಹಜ. ಆದರೆ ಇಲ್ಲೊಬ್ಬ ನವವಿವಾಹಿತ ಜೋಡಿ ಮೊದಲ ರಾತ್ರಿಯನ್ನು ಲಾಕಪ್ ನಲ್ಲಿ ಕಳೆದಿದೆ.
ಮದುವೆ ಮುಗಿಸಿಕೊಂಡು ಕಾರಿನಲ್ಲಿ ಮರಳುತ್ತಿದ್ದಾಗ ಪೊಲೀಸರು ತಪಾಸಣೆ ನಡೆಸಿದ್ದಾರೆ. ಈ ವೇಳೆ ವಧು-ವರ ಇರುವ ಕಾರಿನಲ್ಲಿ ಕೊರೋನಾ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಕಾರಣಕ್ಕೆ ಪೊಲೀಸರು ತಡೆದಿದ್ದಾರೆ.
ಈ ವೇಳೆ ವರ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ನವದಂಪತಿ ವಿರುದ್ಧ ಕೇಸ್ ಜಡಿದು ಪೊಲೀಸರು ಮೊದಲ ರಾತ್ರಿಯನ್ನು ಲಾಕಪ್ ನಲ್ಲಿ ಕಳೆಯುವಂತೆ ಮಾಡಿದ್ದಾರೆ.