Publish Date: Wed, 26 Jan 2022 (10:24 IST)
Updated Date: Wed, 26 Jan 2022 (10:26 IST)
ಗುವಾಹಟಿ: ಮನೆಗೆ ಬಂದು ಚಿನ್ನ ಶುಚಿಗೊಳಿಸಿಕೊಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ವಂಚಿಸಿದದ ಘಟನೆ ಗುವಾಹಟಿಯಲ್ಲಿ ನಡೆದಿದೆ.
ಪತಂಜಲಿ ಕ್ಲೀನಿಂಗ್ ಪೌಡರ್ ನಿಂದ ಚಿನ್ನ ಶುಚಿಗೊಳಿಸಿಕೊಡುವುದಾಗಿ ಮಹಿಳೆಯನ್ನು ನಂಬಿಸಿದ್ದರು. ವಂಚಕರ ಮಾತು ಕೇಳಿ ಮಹಿಳೆ ತನ್ನೆರಡು ಬಳೆಗಳನ್ನು ನೀಡಿದ್ದಳು. ಬಳಿಕ ಬಳೆಗಳಿಗೆ ಪೌಡರ್ ತುಂಬಿ ಮಹಿಳೆಗೆ ನೀಡಿದ್ದು, ಕೆಲವು ಸಮಯದ ನಂತರ ತೆಗೆಯುವಂತೆ ಹೇಳಿದ್ದಾರೆ.
ಅವರ ಮಾತು ನಂಬಿ ಮಹಿಳೆ ಕೆಲವು ಸಮಯದ ನಂತರ ಬಳೆ ತೆಗೆದು ನೋಡಿದಾಗ ವಂಚಕರು ನೀಡಿದ ಪ್ಲಾಸ್ಟಿಕ್ ಬಳೆಗಳಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದರೆ ಅವರೂ ದೂರು ದಾಖಲಿಸುತ್ತಿಲ್ಲ ಎಂದು ಮಹಿಳೆ ದೂರಿದ್ದಾಳೆ.