Publish Date: Fri, 28 Jan 2022 (08:49 IST)
Updated Date: Fri, 28 Jan 2022 (08:51 IST)
ಜೈಪುರ: 9 ನೇ ತರಗತಿ ವಿದ್ಯಾರ್ಥಿಯನ್ನು ಹಿರಿಯ ವಿದ್ಯಾರ್ಥಿಯೊಬ್ಬ ಅಪಹರಿಸಿ ದಿನವಿಡೀ ಲೈಂಗಿಕ ತೃಷೆ ತೀರಿಸಿ ಬಳಿಕ ಸಂತ್ರಸ್ತೆಯ ಮನೆಯ ಹೊರಗೆ ಬಿಟ್ಟು ಹೋಗಿರುವ ಘಟನೆ ನಡೆದಿದೆ.
ಊಟದ ವಿರಾಮದ ವೇಳೆಗೆ ವಿದ್ಯಾರ್ಥಿನಿಯನ್ನು 12 ನೇ ತರಗತಿ ವಿದ್ಯಾರ್ಥಿ ಬಲವಂತವಾಗಿ ಮೋಟಾರ್ ಬೈಕ್ ನಲ್ಲಿ ಕೂರಿಸಿಕೊಂಡು ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದ. ಬಳಿಕ ಆಕೆಯ ಮೇಲೆ ಸಂಜೆಯವರೆಗೆ ಅತ್ಯಾಚಾರ ನಡೆಸಿ ಸಂತ್ರಸ್ತೆಯ ಮನೆ ಬಳಿ ಬಿಟ್ಟು ಹೋಗಿದ್ದ.
ತೀವ್ರ ಅಸ್ವಸ್ಥಗೊಂಡು, ರಕ್ತಸ್ರಾವವಾಗುತ್ತಿದ್ದು ಬಾಲಕಿಯನ್ನು ಗಮನಿಸಿದ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಬಾಲಕಿ ನಡೆದ ವಿಚಾರವನ್ನು ತಿಳಿಸಿದ್ದಳು. ಅದರಂತೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಮತ್ತು ಆತನಿಗೆ ಸಹಾಯ ಮಾಡಿದ ಸ್ನೇಹಿತನನ್ನು ಬಂಧಿಸಲಾಗಿದೆ.