Publish Date: Sun, 30 Jan 2022 (11:53 IST)
Updated Date: Sun, 30 Jan 2022 (09:27 IST)
ಚಾಮರಾಜನಗರ: ಲವ್ ಮಾಡು ಇಲ್ಲದಿದ್ದರೆ ನಿನ್ನ ಅಣ್ಣನನ್ನು ಮುಗಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದ ಇಬ್ಬರು ಯುವಕರಿಗೆ ನ್ಯಾಯಾಲಯ ಜೈಲು ಶಿಕ್ಷೆ ನೀಡಿದೆ.
16 ವರ್ಷದ ಅಪ್ರಾಪ್ತ ಬಾಲಕಿಗೆ ಯುವಕರು ಲವ್ ಮಾಡುವಂತೆ ಪೀಡಿಸುತ್ತಿದ್ದರು. ವಿದ್ಯಾರ್ಥಿಯನಿಯನ್ನು ಹಿಂಬಾಲಿಸುತ್ತಿದ್ದ ಯುವಕರು ಫೋನ್ ಮಾಡಿಯೂ ಬೆದರಿಕೆ ಹಾಕುತ್ತಿದ್ದರು.
ಲವ್ ಮಾಡದೇ ಇದ್ದರೆ ನಿನ್ನ ಅಣ್ಣನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಈ ಸಂಬಂಧ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.