Publish Date: Mon, 01 Feb 2021 (10:01 IST)
Updated Date: Mon, 01 Feb 2021 (10:03 IST)
ಪಾಟ್ನಾ: ಪ್ರೇಯಸಿಯ ಕಣ್ಣೆದುರಲ್ಲೇ ಆಕೆಯ ಸಹೋದರನಿಂದಲೇ ಪ್ರಿಯಕರ ಭೀಕರವಾಗಿ ಹತ್ಯೆಗೀಡಾದ ಘಟನೆ ಬಿಹಾರದಲ್ಲಿ ನಡೆದಿದೆ.
21 ವರ್ಷದ ಮೆಹಬೂಬ್ ಎಂಬಾತ ಆರೋಪಿ. ಈತ ತನ್ನ ಸಹೋದರಿಯನ್ನು ಆಕೆಯ ಪ್ರಿಯಕರ ರಹಸ್ಯವಾಗಿ ಭೇಟಿಯಾಗಲು ಬಂದಾಗ ಹತ್ಯೆ ಮಾಡಿದ್ದಾನೆ. ಕಳೆದ ಏಳು ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇದೀಗ ಪ್ರಿಯಕರನ ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.