Select Your Language

Notifications

webdunia
webdunia
webdunia
webdunia

ಗಂಡನ ಮೇಲಿನ ಸಿಟ್ಟಿಗೆ ಮಗುವನ್ನು ಬಲಿಪಡೆದ ಮಹಿಳೆ

ಗಂಡನ ಮೇಲಿನ ಸಿಟ್ಟಿಗೆ ಮಗುವನ್ನು ಬಲಿಪಡೆದ ಮಹಿಳೆ
ಬೆಂಗಳೂರು , ಶನಿವಾರ, 30 ಜನವರಿ 2021 (09:47 IST)
ಬೆಂಗಳೂರು: ಗಂಡನ ಮೇಲಿನ ಸಿಟ್ಟಿಗೆ ತಾಯಿಯೇ ತನ್ನ 2 ವರ್ಷದ ಹಸುಗೂಸನ್ನು ಹತ್ಯೆ ಮಾಡಿದ ಪ್ರಕರಣ ಚನ್ನರಾಯಪಟ್ಟಣದ ಬಳಿ ನಡೆದಿದೆ.


ನಂಜಪ್ಪ ಎಂಬವರ ಪತ್ನಿ ಸುಮಾ ಎಂಬವರು ಆರೋಪಿ. ದಂಪತಿ ನಡುವೆ ಕೆಲವು ದಿನಗಳ ಹಿಂದೆ ಜಗಳ ನಡೆದಿತ್ತು. ಬಳಿಕ ಪತಿ ನಂಜಪ್ಪ ಹೊಲಕ್ಕೆ ಹೋಗಿದ್ದರು. ಕೆಲವು ಹೊತ್ತಿನ ಬಳಿಕ ಪತ್ನಿ ಸುಮಾ ಕರೆ ಮಾಡಿ ಮಗು ವಾಂತಿ ಮಾಡಿಕೊಳ್ಳುತ್ತಿದೆ ಎಂದಿದ್ದಾಳೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಗು ಮೃತಪಟ್ಟಿದೆ. ಕೆಲವು ದಿನ ಬಳಿಕ ಸಂಶಯಗೊಂಡ ನಂಜಪ್ಪ ಪೊಲೀಸರಿಗೆ ದೂರು ನೀಡಿದ್ದರು. ಮಗುವಿನ ಶವ ಹೊರತೆಗೆದು ಪರೀಕ್ಷೆ ನಡೆಸಿದಾಗ ತಲೆಗೆ ಬಲವಾದ ಪೆಟ್ಟುಬಿದ್ದಿರುವುದು ಸ್ಪಷ್ಟವಾಗಿತ್ತು. ಪೊಲೀಸರು ಆರೋಪಿ ಸುಮಾಳನ್ನು ವಿಚಾರಣೆ ನಡೆಸಿದಾಗ ಜಗಳವಾದಾಗ ಮಗು ಅಳುತ್ತಿತ್ತು. ಈ ಸಂದರ್ಭದಲ್ಲಿ ಸಿಟ್ಟಿನಲ್ಲಿ ಮಗುವಿನ ತಲೆಯನ್ನು ಗೋಡೆಗೆ ಬಡಿದೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಭೀಕರ ಹತ್ಯೆಯ ಹಿಂದೆ ಹೋದ ಪೊಲೀಸರಿಗೆ ಕೊನೆಗೆ ತಿಳಿದಿದ್ದೇನು?!