Publish Date: Tue, 26 Jan 2021 (09:40 IST)
Updated Date: Tue, 26 Jan 2021 (09:41 IST)
ಬೆಂಗಳೂರು: ತಂದೆ ಕೋಟ್ಯಾಧಿಪತಿ. ಆದರೆ ಪುತ್ರ 30 ಸಾವಿರ ರೂ. ಸಾಲ ತೀರಿಸಲು ಮಾಡಿದ ಕೆಲಸ ನೋಡಿದರೆ ಬೆಚ್ಚಿಬೀಳುತ್ತೀರಿ.
ಇದು ನಡೆದಿರುವುದು ರಾಜ್ಯ ರಾಜಧಾನಿ ಬೆಂಗಳೂರಿನ ದೇವನಹಳ್ಳಿಯಲ್ಲಿ. 22 ವರ್ಷದ ಯುವಕ ಅಗರ್ಭ ಶ್ರೀಮಂತನ ಪುತ್ರ. ಹಾಗಿದ್ದರೂ 30 ಸಾವಿರ ರೂ. ಸಾಲ ತೀರಿಸುವುದಕ್ಕಾಗಿ 65 ವರ್ಷದ ವ್ಯಕ್ತಿಯ ಚಿನ್ನಾಭರಣ ದೋಚಿ ಆತನಿಗೆ ಬ್ಯಾಟ್ ನಿಂದ ಹೊಡೆದು ಸಾಯಿಸಿದ್ದಾನೆ. ಮೃತಪಟ್ಟ ವ್ಯಕ್ತಿ ಆರೋಪಿ ಯುವಕನಿಗೆ ಪರಿಚಿತನೇ ಆಗಿದ್ದ ಎನ್ನಲಾಗಿದೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.