Select Your Language

Notifications

webdunia
webdunia
webdunia
webdunia

ಮೇಕೆ ಕದ್ದು ಓಡುತ್ತಿದ್ದವರನ್ನು ಹಿಡಿಯಲು ಹೋದ ವ್ಯಕ್ತಿಯ ಮೇಲೆ ಕಾರು ಹರಿಸಿ ಕೊಂದ ಖದೀಮರು!

ಕಳ್ಳತನ
ಲಕ್ನೋ , ಶುಕ್ರವಾರ, 3 ಜೂನ್ 2022 (08:30 IST)
ಲಕ್ನೋ: ತನ್ನ ಮೇಕೆ ಕದ್ದು ಓಡುತ್ತಿದ್ದವರನ್ನು ಹಿಡಿಯಲು ಹೋದ 50 ವರ್ಷದ ವ್ಯಕ್ತಿಯ ಮೇಲೆ ಕಾರು ಹರಿಸಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.

ರಾತ್ರಿ ವೇಳೆ ತನ್ನ ಮೂವರು ಮೇಕೆಗಳನ್ನು ಕದ್ದು ಓಡುತ್ತಿದ್ದ ಯುವಕರನ್ನು ಗಮನಿಸಿದ ವ್ಯಕ್ತಿ ತನ್ನ ಮೇಕೆಗಳನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಖದೀಮರು ವ್ಯಕ್ತಿಯ ಮೇಲೆಯೇ ಕಾರು ಹರಿಸಿ ಪರಾರಿಯಾಗಿದ್ದಾರೆ.

ಘಟನೆಯಲ್ಲಿ ತೀವ್ರ ಗಾಯಗೊಂಡ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಸಂತ್ರಸ್ತನ ಪುತ್ರ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ಎಲ್‌ಪಿಜಿ ಸಿಲಿಂಡರ್‌ಗೆ ಸಬ್ಸಿಡಿ ಸಿಗಲ್ಲ!