Publish Date: Wed, 29 May 2019 (06:48 IST)
Updated Date: Wed, 29 May 2019 (06:50 IST)
ರಾಜಸ್ತಾನ : ಅಪ್ರಾಪ್ತನೊಬ್ಬ 9 ತಿಂಗಳ ಮಗುವಿನ ಮೇಲೆ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆ ರಾಜಸ್ತಾನದ ಕರೌಲಿ ಜಿಲ್ಲೆಯಲ್ಲಿ ನಡೆದಿದೆ.
ಅಪ್ರಾಪ್ತ ಬಾಲಕನೊಬ್ಬ ಪಕ್ಕದ ಮನೆಯ 9 ತಿಂಗಳ ಮಗುವನ್ನು ಮನೆಗೆ ಕರೆದುಕೊಂಡು ಹೋಗಿದ್ದ. ಆದರೆ ಕೆಲ ಸಮಯದ ನಂತರ ಆತ ಮಗುವನ್ನು ಮನೆಗೆ ವಾಪಸ್ ಕರೆದುಕೊಂಡು ಬಂದಾಗ ಬಾಲಕಿಯ ಖಾಸಗಿ ಅಂಗದಲ್ಲಿ ರಕ್ತ ಬರುತ್ತಿತ್ತು.
ಇದನ್ನು ನೋಡಿದ ಪಾಲಕರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದಾಗಿ ತಿಳಿಸಿದ ಹಿನ್ನಲೆಯಲ್ಲಿ ಪಾಲಕರು ಅಪ್ರಾಪ್ತನ ವಿರುದ್ಧ ದೂರು ದಾಖಲಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ವರದಿ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.