ಬಾಲಕಿಯ ಕೈಯಲ್ಲಿ ತಿಂಡಿ ತರಲು 10ರೂ ಕೊಟ್ಟ ವ್ಯಕ್ತಿ ಆಮೇಲೆ ಮಾಡಿದ್ದೇನು ಗೊತ್ತಾ?

ಮಂಗಳವಾರ, 21 ಮೇ 2019 (06:40 IST)
ಶಿಮ್ಲಾ : ಆಟವಾಡುತ್ತಿದ್ದ  9 ವರ್ಷದ ಬಾಲಕಿಯನ್ನು ಕರೆದು ಆಕೆಯ  ಕೈಯಲ್ಲಿ 10 ರೂ ಕೊಟ್ಟು ತಿಂಡಿ ತರಲು ಹೇಳಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಮತದಾನ ಕೇಂದ್ರದ ಬಳಿನಡೆದಿದೆ.
ದೇವೇಂದ್ರ ಸಿಂಗ್ ಅತ್ಯಾಚಾರ ಎಸಗಿದ ಆರೋಪಿ. ಸಂತ್ರಸ್ತೆಯ ತಾಯಿ ಚುನಾವಣಾ ಕಾರ್ಯದಲ್ಲಿ ಬ್ಯುಸಿಯಾಗಿದ್ದ ಕಾರಣ  ಆಕೆ ಮತದಾನ ಕೇಂದ್ರದ ಬಳಿಯ ಶಾಲಾ ಮೈದಾನದಲ್ಲಿ ಆಟವಾಡುತ್ತಿದ್ದಳು. ಆ ವೇಳೆ ಆರೋಪಿ ಬಾಲಕಿಗೆ 10 ರೂ. ಕೊಟ್ಟು ತಿಂಡಿ ತರುವಂತೆ ಕಳುಹಿಸಿದ್ದಾನೆ. ಆಗ ಬಾಲಕಿ ಹಣ ತೆಗೆದುಕೊಂಡು ಅಂಗಡಿಯತ್ತ ಹೋಗುತ್ತಿದ್ದಾಗ ಆರೋಪಿ ಆಕೆಯನ್ನು ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡದೊಳಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.


ಈ  ವಿಚಾರ ತಿಳಿಯುತ್ತಿದ್ದಂತೆಯೇ ತಾಯಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 
 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪಾರ್ಕ್ ನಲ್ಲಿ ಮಾಡಬಾರದನ್ನು ಮಾಡಿ ಜೈಲು ಸೇರಿದ ಮಹಿಳೆ