Publish Date: Mon, 20 May 2019 (13:23 IST)
Updated Date: Mon, 20 May 2019 (13:25 IST)
ಮದುವೆಯಾದ ತಕ್ಷಣವೇ ವರನೊಬ್ಬ ಇಂತಹ ಕೆಲಸ ಮಾಡಿ ಮದುವೆಗೆ ಬಂದವರಿಗೆ ಹಾಗೂ ಜನರ ಗಮನ ಸೆಳೆದಿದ್ದಾರೆ.
ರವಿವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಮಶೆಟ್ಟಿ-ನಾಗವೇಣಿ ಹಾಗೂ ವೀರಣ್ಣ-ಲಕ್ಷ್ಮೀ ಎಂಬ ಎರಡು ನವ ದಂಪತಿಗಳು ಮದುವೆ ಛತ್ರದಿಂದ ನೇರವಾಗಿ ರಟಕಲ್ ಗ್ರಾಮದಲ್ಲಿನ ಮತಗಟ್ಟೆಗೆ ತೆರಳಿದ್ದಾರೆ.
ತಮ್ಮ ಮತ ಚಲಾಯಿಸುವ ಮೂಲಕ ಮತದಾನದ ಮಹತ್ವ ಸಾರಿದರು. ಅದೇ ರೀತಿ ಚಿಂಚೋಳಿ ಕ್ಷೇತ್ರದ ಚಿಮ್ಮ ಇದಲಾಯಿ ಗ್ರಾಮದಲ್ಲಿ ವೀರಭದ್ರಪ್ಪ ಮತ್ತು ಸಪ್ನ ಅವರು ನವಬಾಳಿಗೆ ಹೆಜ್ಜೆಯಿಟ್ಟರು.
ಮದುವೆಯಾದ ಬಳಿಕ ನೇರವಾಗಿ ಮತಗಟ್ಟೆಗೆ ಆಗಮಿಸಿದ ಮಧುಮಗ ವೀರಭದ್ರಪ್ಪ ಅವರು ತಮ್ಮ ಅಮೂಲ್ಯವಾದ ಮತ ಚಲಾಯಿಸಿದರು. ಚಿಂಚೋಳಿ ವಿಧಾನ ಸಭೆಯ ಉಪಚುನಾವಣೆಯಲ್ಲಿ ಒಟ್ಟು ಮೂರು ಜೋಡಿಗಳು ಮದುವೆ ದಿನವೇ ಮತ ಚಲಾಯಿಸಿ ಮಾದರಿಯಾದರು.