ಪುಣೆ: ಮಾಲಿಕರಿಗೆ ಬೆಂಕಿ ಹಚ್ಚಲು ಹೋಗಿ ನೌಕರನೊಬ್ಬ ತಾನೇ ಬೆಂಕಿಗೆ ಆಹುತಿಯಾದ ಘಟನೆ ಪುಣೆಯಲ್ಲಿ ನಡೆದಿದೆ.
									
			
			 
 			
 
 			
			                     
							
							
			        							
								
																	ಟೈಲರಿಂಗ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ತನ್ನನ್ನು ಕೆಲಸದಿಂದ ಕಿತ್ತು ಹಾಕಿದ ಸಿಟ್ಟು ಹೊರಹಾಕಲು ನೌಕರನೊಬ್ಬ ಆಕೆಗೆ ಬೆಂಕಿ ಹಚ್ಚಿದ್ದು, ಇದೇ ಬೆಂಕಿಗೆ ಆತನೇ ಆಹುತಿಯಾಗಿದ್ದಾನೆ.
									
										
								
																	ತನ್ನನ್ನು ಕೆಲಸದಿಂದ ಕಿತ್ತು ಹಾಕಿದ್ದಕ್ಕೆ ಕಾರಣ ಕೇಳಲು ಅಂಗಡಿಗೆ ಬಂದಿದ್ದ ಆರೋಪಿ ಬಳಿಕ ಕಿತ್ತಾಟವಾಗಿ ಬೆಂಕಿ ಹಚ್ಚಿದ್ದಾನೆ. ಈ ವೇಳೆ ಆತನೇ ತೀವ್ರ ಸುಟ್ಟ ಗಾಯಕ್ಕೊಳಗಾಗಿದ್ದಾನೆ. ಇಬ್ಬರನ್ನೂ ರಕ್ಷಿಸಲು ಹೋದ ಇನ್ನೊಬ್ಬಾತನಿಗೂ ಸುಟ್ಟ ಗಾಯಗಳಾಗಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.