ಮುಂಬೈ: ಯೂ ಟ್ಯೂಬ್ ನೋಡಿ ತನ್ನ ಮಾಲಿಕರ ಬ್ಯಾಂಕ್ ಖಾತೆಗೇ ಕನ್ನ ಹಾಕಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಯೂ ಟ್ಯೂಬ್ ನಲ್ಲಿ ಇನ್ನೊಬ್ಬ ವ್ಯಕ್ತಿಯ ಎಟಿಎಂ ಪಾಸ್ ವರ್ಡ್ ಬದಲಾಯಿಸುವುದು ಹೇಗೆ? ಮೊಬೈಲ್ ನಂಬರ್ ಬದಲಾಯಿಸುವುದು ಹೇಗೆ ಎಂಬಿತ್ಯಾದಿ ಮಾಹಿತಿ ತಿಳಿದುಕೊಂಡಿದ್ದ.
ಅದೇ ಉಪಾಯ ಬಳಸಿ ತನ್ನ ಮಾಲಿಕರ ಖಾತೆಯಿಂದ 17 ಲಕ್ಷ ರೂ. ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ. ಆದರೆ ಮಾಲಿಕರ ಪುತ್ರಿ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಹಣ ವಿತ್ ಡ್ರಾ ಆಗಿರುವುದು ತಿಳಿದು ಶಾಕ್ ಆಗಿದೆ. ಈ ಬಗ್ಗೆ ಅವರು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದರು.