Select Your Language

Notifications

webdunia
webdunia
webdunia
webdunia

ಮೋಜಿಗಾಗಿ ಸುಲಿಗೆ ಮಾಡುತ್ತಿದ್ದವರ ಸೆರೆ

ಮೋಜಿಗಾಗಿ ಸುಲಿಗೆ ಮಾಡುತ್ತಿದ್ದವರ ಸೆರೆ
ಬೆಂಗಳೂರು , ಶನಿವಾರ, 26 ಫೆಬ್ರವರಿ 2022 (08:55 IST)
ಬೆಂಗಳೂರು: ಮೋಜಿನ ಜೀವನಕ್ಕಾಗಿ ದರೋಡೆ, ಸುಲಿಗೆ ಮಾಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

23 ವರ್ಷದ ಇಬ್ಬರು ಯುವಕರು ಅರೆಸ್ಟ್ ಆದವರು. ಇವರು ತಡರಾತ್ರಿ ಬೈಕ್ ಸವಾರರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು.

ಈ ರೀತಿ ಬಂದ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದರು. ಇದೇ ರೀತಿ ಬೈಕ್ ಸವಾರರೊಬ್ಬರನ್ನು ಅಡ್ಡಗಟ್ಟಿ ಸಾವಿರ ರೂ. ದೋಚಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕ್ ಸವಾರ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡನಿಂದಾಗಿ ಹೆಂಡತಿಗೆ ಅವಮಾನ: ಮಹಿಳೆ ಆತ್ಮಹತ್ಯೆ