Select Your Language

Notifications

webdunia
webdunia
webdunia
webdunia

ಅತ್ತಿಗೆ, ಮಗಳ ಮೇಲೆಯೇ ಕಾಮದ ಕಣ್ಣು ಹಾಕಿದ ಮೈದುನ

ಅತ್ತಿಗೆ, ಮಗಳ ಮೇಲೆಯೇ ಕಾಮದ ಕಣ್ಣು ಹಾಕಿದ ಮೈದುನ
ಮುಂಬೈ , ಗುರುವಾರ, 17 ಫೆಬ್ರವರಿ 2022 (10:13 IST)
ಮುಂಬೈ: ಅತ್ತಿಗೆ ಮತ್ತು ಆಕೆಯ ಹದಿಹರೆಯದ ಮಗಳ ಮೇಲೆ ಕಾಮದ ಕಣ್ಣು ಹಾಕಿದ್ದ 21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗಷ್ಟೇ ಮದುವೆಯಾಗಿದ್ದ ಯುವಕ ಬೇರೆ ಊರಿನಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಮನೆಗೆ ಬಂದಿದ್ದಾಗ ಅತ್ತಿಗೆ ಮತ್ತು ಮಗಳು ತನ್ನ ಮನೆಗೆ ಬಂದು ನೆಲೆಸಿರುವುದನ್ನು ನೋಡಿ ಆತ ಕೋಪಗೊಂಡಿದ್ದ. ಈ ಬಗ್ಗೆ ಜಗಳವೂ ಆಗಿತ್ತು. ಈ ಸಂಬಂಧ ಪೊಲೀಸರಿಗೆ ಮೊದಲು ಈತನೇ ದೂರು ನೀಡಿದ್ದ. ಇದು ಆಸ್ತಿ ಸಂಬಂಧವಾಗಿ ನಡೆಯುತ್ತಿರುವ ಗಲಾಟೆ ಎಂದು ತಿಳಿದುಬಂದಿತ್ತು.

ಆದರೆ ಮರುದಿನ ಅತ್ತಿಗೆಯೂ ಪೊಲೀಸರಿಗೆ ದೂರು ನೀಡಿದ್ದರು. ತನ್ನ ಹಾಗೂ ಮಗಳ ಮೇಲೆ ಮೈದುನನೇ ಲೈಂಗಿಕ ಕುರುಕುಳ ನೀಡುತ್ತಿದ್ದಾನೆ ಎಂದು ದೂರು ನೀಡಿದ್ದಳು. ಹೀಗಾಗಿ ಪೊಲೀಸರು ಈಗ ಲೈಂಗಿಕ ದೌರ್ಜನ್ಯ ಪ್ರಕರಣದಡಿಯಲ್ಲಿ ಯುವಕನ ಮೇಲೆ ಕ್ರಮ ಕೈಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಫ್ ಲೈನ್ ಕ್ಲಾಸ್ ತರಗತಿಗೆ ಹಾಜರಾಗು ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ