ಮುಂಬೈ: ತನ್ನ ಮನೆ ಮಾಲಿಕರ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ನಗ್ನ ವಿಡಿಯೋ ಮಾಡಿದ ನೌಕರನೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಹೆಣ್ಣುಮಕ್ಕಳ ತಂದೆ ಅಂಗಡಿಯೊಂದರ ಮಾಲಿಕರಾಗಿದ್ದು, ಅಲ್ಲಿ ಆರೋಪಿ ಕೆಲಸ ಮಾಡುತ್ತಿದ್ದ. ಮಾಲಿಕನಿಲ್ಲದೇ ಇದ್ದ ಸಮಯ ನೋಡಿಕೊಂಡು ಆರೋಪಿ ಇಬ್ಬರು ಅಪ್ರಾಪ್ತ ಹುಡುಗಿಯರು ಬಟ್ಟೆ ಬದಲಾಯಿಸುವಾಗ, ಸ್ನಾನ ಮಾಡುವಾಗ ಕದ್ದು ಮುಚ್ಚಿ ವಿಡಿಯೋ ಮಾಡುತ್ತಿದ್ದ.
ಇತ್ತೀಚೆಗೆ ಸಂತ್ರಸ್ತ ಹುಡುಗಿಯರು ಆರೋಪಿಯ ಮೊಬೈಲ್ ಪಡೆದು ಗೇಮ್ ಆಡುತ್ತಿದ್ದಾಗ ತಮ್ಮದೇ ನಗ್ನ ವಿಡಿಯೋ ನೋಡಿ ಶಾಕ್ ಆಗಿದ್ದರು. ಈ ವಿಚಾರವನ್ನು ತಮ್ಮ ಪೋಷಕರಿಗೆ ತಿಳಿಸಿದ್ದರು. ತಕ್ಷಣವೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.