Select Your Language

Notifications

webdunia
webdunia
webdunia
webdunia

ಮಲ್ಲಿಕಾರ್ಜುನ ಖರ್ಗೆ-ರಾಹುಲ್ ಗಾಂಧಿ: ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು?

ಮಲ್ಲಿಕಾರ್ಜುನ ಖರ್ಗೆ-ರಾಹುಲ್ ಗಾಂಧಿ: ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು?
ನವದೆಹಲಿ , ಸೋಮವಾರ, 25 ಡಿಸೆಂಬರ್ 2023 (10:15 IST)
Photo Courtesy: Twitter
ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಸೋಲಿಸಿ ಅಧಿಕಾರಕ್ಕೇರಲು ವಿಪಕ್ಷಗಳು ಕಾಂಗ್ರೆಸ್ ನೇತೃತ್ವದಲ್ಲಿ ಒಟ್ಟಾಗಿವೆ.

ಇಂಡಿಯಾ ಎಂದ ಮೈತ್ರಿಕೂಟ ನಿರ್ಮಿಸಿ ನರೇಂದ್ರ ಮೋದಿಯವರನ್ನು ಸೋಲಿಸುವ ಪಣ ತೊಟ್ಟಿದೆ. ಆದರೆ ಈ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

ಇದಕ್ಕೆ ಮೊದಲು ನಡೆದ ಇಂಡಿಯಾ ಮೈತ್ರಿ ಕೂಟ ಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿಯಾಗಲಿ ಎಂಬ ಅಭಿಪ್ರಾಯ ಕೇಳಿಬಂದಿತ್ತು. ಆದರೆ ಇತ್ತ ರಾಹುಲ್ ಗಾಂಧಿ ಕೂಡಾ ಪ್ರಧಾನಿಯಾಗುವ ಕನಸು ಹೊತ್ತಿದ್ದಾರೆ.

ಕಾಂಗ್ರೆಸ್ ನಲ್ಲಿ ಹಲವರಿಗೆ ನೆಹರೂ ಕುಟುಂಬದ ರಾಹುಲ್ ಗಾಂಧಿಯನ್ನು ಪ್ರಧಾನಿಯಾಗಿ ನೋಡುವ ಆಸೆಯಿದೆ. ಆದರೆ ಸದ್ಯಕ್ಕೆ ಅವರು ಪ್ರಧಾನಿಯಾಗುವುದಕ್ಕೆ ಮೈತ್ರಿ ಕೂಟದಲ್ಲಿ ಒಮ್ಮತ ಸಿಗುವುದು ಕಷ್ಟ. ಹಾಗಿದ್ದರೂ ಅಷ್ಟು ಬೇಗ ರಾಹುಲ್ ಗಾಂಧಿಯನ್ನೂ ಪ್ರಧಾನಿ ರೇಸ್ ನಿಂದ ಹೊರಗಿಡಲು ಸಾಧ‍್ಯವಿಲ್ಲ. ಹೀಗಾಗಿ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆಯೋ ರಾಹುಲ್ ಗಾಂಧಿಯೋ ಎಂಬ ಚರ್ಚೆ ಮುಂದುವರಿಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಜಾಬ್ ಹಾಕಿದ್ರೆ ಕೇಸರಿ ಹಾಕ್ತೀವಿ ಎಂದಿದ್ದಕ್ಕೆ ತಣ್ಣಗಾಯ್ತಾ ಸರ್ಕಾರ? ಗೃಹಸಚಿವರು ಹೇಳಿದ್ದೇನು?