Select Your Language

Notifications

webdunia
webdunia
webdunia
webdunia

ಎಲೆಕ್ಷನ್ ಇದೆ ಅಂತ ಮೋದಿ ಸೋಮನಾಥ ಮಂದಿರ ಸಂಭ್ರಮಾಚರಣೆ ಡ್ರಾಮಾ ಮಾಡ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

Mallikarjun Kharge
ಕಲಬುರಗಿ: ಚುನಾವಣೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮನಾಥ ಮಂದಿರ ಸಂಭ್ರಮಾಚರಣೆ ಮಾಡ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ಸೋಮನಾಥ ಮಂದಿರದ ಮೇಲೆ ದಾಳಿಯಾದ ಬಳಿಕ 1000 ವರ್ಷಗಳ ಸಂಭ್ರಮಾಚರಣೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದರು. ದೇಶದ ಜನತೆಗೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಿದ್ದರು. ಇದರ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ಇದೆಲ್ಲಾ ಚುನಾವಣೆ ಗಿಮಿಕ್ ಎಂದು ಹೇಳಿದ್ದಾರೆ. ಪಂಚ ರಾಜ್ಯ ಚುನಾವಣೆ ಹತ್ತಿರ ಬರುತ್ತಿದೆ. ಇದಕ್ಕಾಗಿ ಮೋದಿ ಈ ಗಿಮಿಕ್ ಮಾಡುತ್ತಿದ್ದಾರೆ ಎಂದಿದ್ದಾರೆ. ‘ದೇವರ ಹೆಸರಿನಲ್ಲಿ ಜನರನ್ನು ಲೂಟಿ ಮಾಡುವ ಪ್ರಯತ್ನ ನಡೆಯುತ್ತಿದೆ. ದೇವರು, ಧರ್ಮ ಜನರ ಒಳಿತಿಗಾಗಿ ಇದೆ. ಆದರೆ ಮೋದಿ ಮತ್ತು ಬಿಜೆಪಿ ಇದನ್ನು ಚುನಾವಣಾ ಗಿಮಿಕ್ ಮಾಡಿಕೊಂಡಿದೆ. ಆದರೆ ಜನ ಧರ್ಮದ ಹೆಸರಿನಲ್ಲಿ ಒಡೆದು ಆಳುವುದರ ವಿರುದ್ಧ ಇದ್ದಾರೆ. ರಾಮಮಂದಿರವನ್ನೂ ಚುನಾವಣೆ ಗಿಮಿಕ್ ಗಾಗಿ ನಿರ್ಮಿಸಲಾಯಿತು. ಈಗ ಸೋಮನಾಥ ಮಂದಿರದ ಸಂಭ್ರಮಾಚರಣೆಯನ್ನೇ ಚುನಾವಣೆ ಗಮನದಲ್ಲಿಟ್ಟುಕೊಂಡೇ ಮಾಡಲಾಗುತ್ತಿದೆ’ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ರಾಹುಲ್ ಗಾಂಧಿ ಭೇಟಿಗೆ ಮುಹೂರ್ತ ಫಿಕ್ಸ್: ಕುರ್ಚಿ ಕದನದ ಕ್ಲೈಮ್ಯಾಕ್ಸ್