Daily Horoscope

Select Your Language

Notifications

webdunia
webdunia
webdunia
webdunia

ಸಿಎಂ ಬದಲಾವಣೆಗೆ ತುದಿಗಾಲಲ್ಲಿ ನಿಂತವರಿಗೆ ಮಲ್ಲಿಕಾರ್ಜುನ ಖರ್ಗೆಯಿಂದಲೇ ಸ್ಪಷ್ಟ ಸಂದೇಶ

Mallikarjun Kharge
ಬೆಂಗಳೂರು: ಸಿಎಂ ಬದಲಾವಣೆಗೆ ತುದಿಗಾಲಿನಲ್ಲಿ ನಿಂತಿರುವ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಡಕ್ ಸಂದೇಶ ನೀಡಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆಯಾಗಬೇಕು ಎಂದು ಡಿಕೆ ಶಿವಕುಮಾರ್ ಬಣ ಪಟ್ಟು ಹಿಡಿದಿದ್ದರೆ ಇತ್ತ ಸಿದ್ದರಾಮಯ್ಯ ಬಣ ಯಾವುದೇ ಕಾರಣಕ್ಕೂ ಬೇಡ ಎಂದು ಮೀಟಿಂಗ್ ಮೇಲೆ ಮೀಟಿಂಗ್ ನಡೆಸುತ್ತಿದೆ. ಇದರ ನಡುವೆ ಖರ್ಗೆ ಮಹತ್ವದ ಸಂದೇಶ ನೀಡಿದ್ದಾರೆ.

ಡಿಕೆಶಿ ಪಕ್ಷ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರಿಂದಲೇ ಈ ಬಾರಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ ಎಂದು ಅವರ ಬಣ ವಾದಿಸುತ್ತಿದೆ. ಆದರೆ ಇವರಿಗೆ ಖರ್ಗೆ ಖಡಕ್ ಸಂದೇಶ ನೀಡಿದ್ದಾರೆ. ಯಾರಿಂದಲೋ ಒಬ್ಬರಿಂದ ಪಕ್ಷ ಅಧಿಕಾರಕ್ಕೆ ಬಂದಿಲ್ಲ. ಕಾರ್ಯಕರ್ತರ ಶ್ರಮವಿದೆ ಎಂದಿದ್ದಾರೆ.

ಅಲ್ಲದೆ, ಸಂಕ್ರಾಂತಿ ವೇಳೆಗೆ ನಾಯಕತ್ವ ಬದಲಾವಣೆ ವಿಚಾರ ಇತ್ಯರ್ಥವಾಗಲಿದೆ ಎಂದು ಡಿಕೆಶಿ ಬಣ ಆಶಾಭಾವದಲ್ಲಿದೆ. ಆದರೆ ಖರ್ಗೆ, ಈ ಗೊಂದಲಗಳನ್ನು ಸೃಷ್ಟಿ ಮಾಡಿದ್ದೇ ನಾವಲ್ಲ ಎಂದಿದ್ದಾರೆ. ಹೀಗಾಗಿ ಡಿಕೆಶಿ ಹೇಳಿದಂತೆ ಹೈಕಮಾಂಡ್ ಬುಲಾವ್ ನೀಡಲಿದೆ, ದೆಹಲಿಗೆ ಹೋಗಲಿದ್ದೇವೆ ಎಂಬುದೆಲ್ಲಾ ಸುಳ್ಳಾ ಎಂಬ ಅನುಮಾನ ಮೂಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಇನ್ನೂ ಮೂರು ದಿನ ಶೀತಗಾಳಿಯ ಎಚ್ಚರಿಕೆ