ಬೆಂಗಳೂರು: ನರೇಗಾ ಯೋಜನೆಯನ್ನು ನಿಲ್ಲಿಸಿದ್ರೆ ಜನ ನಿಮ್ಮನ್ನು ರಸ್ತೆಯಲ್ಲಿ ಓಡಾಡಲು ಬಿಡಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿಗೆ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನರೇಗಾ ಯೋಜನೆಯ ಹೆಸರು ಬದಲಿಸಿ ಕೇಂದ್ರ ಸರ್ಕಾರ ಜಿ ರಾಮ್ ಜಿ ಬಿಲ್ ಪಾಸ್ ಮಾಡಿರುವುದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಬಡವರಿಗಾಗಿ ಮಾಡಿದ ಯೋಜನೆಯಾಗಿತ್ತು. ಇದನ್ನು ಬದಲಿಸುವುದು ಒಳ್ಳೆಯದಲ್ಲ ಎಂದಿದ್ದಾರೆ.
ಹಳೆಯ ಯೋಜನೆಗಳನ್ನು ಬದಲಿಸಲು ನೀವು ಕೆಲಸ ಮಾಡುತ್ತಿರುವುದು ಸರಿಯಲ್ಲ. ಆ ರೀತಿ ಮಾಡಿದರೆ ಜನ ನಿಮ್ಮ ಪಕ್ಷದ ನಾಯಕರನ್ನು ರಸ್ತೆಯಲ್ಲಿ ಓಡಾಡಲು ಬಿಡಲ್ಲ. ಹೊಸ ಬಿಲ್ ನಲ್ಲಿ ರೈಟು ವರ್ಕ್ ಅಂಶವನ್ನು ಕೈ ಬಿಡಲಾಗಿದೆ. ಇದು ಸರಿಯಲ್ಲ ಎಂದು ಖರ್ಗೆ ಹೇಳಿದ್ದಾರೆ.
ಈ ಹಿಂದೆ ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಈ ಯೋಜನೆ ತರಲಾಯಿತು. ಆಗಲೂ ಬಿಜೆಪಿಯವರು ಈ ಯೋಜನೆಯನ್ನು ವಿರೋಧಿಸಿದ್ರು. ಬಳಿಕ ಅದನ್ನು ಒಪ್ಪಿಕೊಂಡ್ರು. ಈಗ ಅದರ ಹೆಸರು ಬದಲಾಯಿಸಲಾಗಿದೆ. ಇದರ ಹಿಂದಿನ ಉದ್ದೇಶವೇನು? ಜನರನ್ನು ಗುಲಾಮಗಿರಿಗೆ ತಳ್ಳೋದಾ? ಎಂದು ಖರ್ಗೆ ಪ್ರಶ್ನೆ ಮಾಡಿದ್ದಾರೆ.