ನವದೆಹಲಿ: ಮೋದಿ ಸಂಸತ್ ಇರುವಾಗ ವಿದೇಶಗಳಿಗೆ ಹೋಗ್ತಾರೆ, ರಾಹುಲ್ ಗಾಂಧಿ ಹೋಗಬಾರದಾ ಎಂದು ಪ್ರಶ್ನಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ನೆಟ್ಟಿಗರ ಪ್ರತಿಕ್ರಿಯೆ ನೋಡಿ.
ನಿನ್ನೆ ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಬೃಹತ್ ಸಮಾವೇಶ ನಡೆದಿತ್ತು. ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಸಂಸತ್ ಕಲಾಪ ನಡೆಯುವಾಗಲೇ ಮೋದಿ ಅರ್ಧಕ್ಕೇ ಬಿಟ್ಟು ವಿದೇಶಗಳಿಗೆ ಹೋಗ್ತಾರೆ. ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡದೇ ಹೋಗ್ತಾರೆ. ಹಾಗಿದ್ದಾಗ ರಾಹುಲ್ ಗಾಂಧಿ ಹೋದರೆ ಏನು ತಪ್ಪು ಎಂದು ಪ್ರಶ್ನೆ ಮಾಡಿದ್ದರು.
ಇದಕ್ಕೆ ಮೊದಲು ಪ್ರಿಯಾಂಕ ಗಾಂಧಿ ಕೂಡಾ ಇದೇ ಮಾತು ಹೇಳಿದ್ದರು. ಮೋದಿ ಯಾವತ್ತೂ ವಿದೇಶ ಪ್ರವಾಸಗಳಲ್ಲೇ ಇರುತ್ತಾರೆ. ಹಾಗಿರುವಾಗ ರಾಹುಲ್ ಗಾಂಧಿ ಹೋದರೆ ಏನು ಸಮಸ್ಯೆ ಎಂದಿದ್ದರು. ಈಗ ಮಲ್ಲಿಕಾರ್ಜುನ ಖರ್ಗೆ ಕೂಡಾ ಅದೇ ಮಾತು ಹೇಳಿದ್ದಾರೆ.
ಇದಕ್ಕೆ ನೆಟ್ಟಿಗರು ಮಲ್ಲಿಕಾರ್ಜುನ ಖರ್ಗೆಯವರನ್ನು ಟ್ರೋಲ್ ಮಾಡಿದ್ದಾರೆ. ಮೋದಿ ದೇಶದ ಪ್ರಧಾನಿ. ಅವರು ಇನ್ನೊಂದು ದೇಶದ ಆಹ್ವಾನದ ಮೇರೆಗೆ ಇಲ್ಲವೇ ಶೃಂಗಸಭೆಗಳಿಗೆ ಅಧಿಕೃತ ಆಹ್ವಾನ ಪಡೆದು ಭಾರತದ ಪ್ರತಿನಿಧಿಯಾಗಿ ಹೋಗುತ್ತಾರೆ. ರಾಹುಲ್ ಗಾಂಧಿ ಪ್ರಮುಖ ಸಮಯಗಳಲ್ಲೇ ವಿದೇಶಗಳಿಗೆ ಯಾಕೆ ಹೋಗ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಸರಿಯಾಗಿ ಹೇಳಿದ್ದೀರಿ ಖರ್ಗೆ ಜೀ ಎಂದಿದ್ದಾರೆ.