Select Your Language

Notifications

webdunia
webdunia
webdunia
webdunia

ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ: ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆದ್ದ ಅಯ್ಯಪ್ಪ ವೃತಾಧಾರಿಗಳು

Sabarimala Makar Jyoti

Sampriya

ಶಬರಿಮಲೆ , ಮಂಗಳವಾರ, 14 ಜನವರಿ 2025 (19:16 IST)
Photo Courtesy X
ಶಬರಿಮಲೆ: ಮಕರ ಸಂಕ್ರಾಂತಿಯಂದು ಕೇರಳದ ಶಬರಿಮಲೆಯಲ್ಲಿ ಕಾಣುವ ಮಕರ ಜ್ಯೋತಿಯನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡಿದ್ದಾರೆ.

ಸಾವಿರಾರೂ ಭಕ್ತರು ಅಯ್ಯಪ್ಪನ ಭಕ್ತಿಗೀತೆ ಗುಣಗಾನ ಮಾಡುತ್ತಾ ಮಕರ ಜ್ಯೋತಿ ದರ್ಶನ ಪಡೆದರು. ಸ್ವಾಮಿ ಅಯ್ಯಪ್ಪ ದೇಗುಲದ ಎದುರಿನ ಪೊನ್ನಂಬಲಮೇಡುವಿನಲ್ಲಿ ಸಂಜೆ 6:45 ಕ್ಕೆ ಮಕರ ಜ್ಯೋತಿ ದರ್ಶನವಾಯಿತು.

ಶಬರಿಮಲೆಯಿಂದ 4 ಕಿಲೋಮೀಟರ್ ದೂರದಲ್ಲಿರುವ ಪೊನ್ನಂಬಲಮೇಡುವಿನಲ್ಲಿ ಮಕರ ಜ್ಯೋತಿಯ ಅಮೃತ ಘಳಿಗೆಗಾಗಿ ಕಾದಿದ್ದ =ಭಕ್ತ ಕಣ್ತುಂಬಿಕೊಂಡರು.

ಕೇರಳದ ಪವಿತ್ರ ಸ್ಥಳವಾದ ಅಯ್ಯಪ್ಪ ದೇಗುಲದಲ್ಲಿ ಮಂಗಳವಾರ ಮಕರ ಸಂಕ್ರಾಂತಿ ಪ್ರಯುಕ್ತ ವಿಶೇಷ ಪೂಜೆ-ಪುನಸ್ಕಾರಗಳು ಆಯೋಜನೆಗೊಂಡಿದ್ದವು. ಇನ್ನು ಪಂದಳ ರಾಜಮನೆತನದಿಂದ ಆಭರಣಗಳನ್ನು ತಂದು ಆಯ್ಯಪ್ಪ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಮಹಾಮಂಗಳಾರತಿ ವೇಳೆಗೆ ಜ್ಯೋತಿರೂಪದಲ್ಲಿ ಅಯ್ಯಪ್ಪ ಕಾಣಿಸಿಕೊಂಡಿದ್ದಾರೆ.

ಶಬರಿಮಲೆ ದೇವಸ್ಥಾನದಲ್ಲಿ ಮಕರ ವಿಳಕ್ಕು ಉತ್ಸವಕ್ಕೆ ಬಿಗಿ ಭದ್ರತೆ ಮಾಡಲಾಗಿದ್ದು, ಒಟ್ಟು 5,000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರೊಂದೆಗೆ ಯಾತ್ರಿಕರನ್ನು ನಿರ್ವಹಣೆ ಮಾಡಲು ಮತ್ತು ಧಾರ್ಮಿಕ ಕಾರ್ಯಕ್ರಮದ ಸಮಯದಲ್ಲಿ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಮಕರ ಜ್ಯೋತಿ ಅಂದರೇನು: ಸೂರ್ಯನು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುವ ಆ ವಿಶೇಷ ಶುಭ ಮುಹೂರ್ತದಲ್ಲಿ ಆಕಾಶದಲ್ಲಿ ಬೆಳಗುವ ನಕ್ಷತ್ರವೇ ಮಕರ ಜ್ಯೋತಿ. ಅಂದರೆ ಮಕರ ಜ್ಯೋತಿಯು ಆಕಾಶದಲ್ಲಿ ಕಾಣಿಸಿಕೊಳ್ಳುವ ನಕ್ಷತ್ರ ಎನ್ನಲಾಗಿದ್ದು, ಮಕರ ಮಾಸದ ಮೊದಲ ದಿನದಂದು ಉದಯಿಸುವ ನಕ್ಷತ್ರವನ್ನು ಮಕರಜ್ಯೋತಿ ಎಂದು ಕರೆಯಲಾಗುತ್ತದೆ. ಈ ನಕ್ಷತ್ರವು ಸೂರ್ಯಾಸ್ತದ ನಂತರ ಹೆಚ್ಚು ಗೋಚರಿಸುತ್ತದೆ ಮತ್ತು ಸ್ವಲ್ಪ ಸಮಯದೊಳಗೆ ಕಣ್ಮರೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಲ್ಕು ಮಕ್ಕಳನ್ನು ಹೊಂದುವ ದಂಪತಿಗೆ ₹1 ಲಕ್ಷ ಬಹುಮಾನ: ಈ ಆಫರ್‌ ಯಾರಿಗೆಲ್ಲ ಸಿಗುತ್ತೆ