ಲಕ್ನೋ (ಉತ್ತರ ಪ್ರದೇಶ): ಉತ್ತರ ಪ್ರದೇಶದ 75 ಜೈಲುಗಳಲ್ಲಿ ಬಂಧಿತರಾಗಿರುವ ಸುಮಾರು 90 ಸಾವಿರ ಕೈದಿಗಳಿಗೆ ಮಹಾಕುಂಭದ ಪವಿತ್ರ ಸ್ನಾನ ಮಾಡಲು ಅವಕಾಶ ನೀಡಲಾಯಿತು.
ಅಧಿಕಾರಿಗಳು ಲಕ್ನೋ, ಅಯೋಧ್ಯೆ ಮತ್ತು ಅಲಿಘರ್‌ನ ವಿವಿಧ ನಗರಗಳ ಜೈಲುಗಳಿಗೆ ತ್ರಿವೇಣಿ ಸಂಗಮದ ಕೆಲವು ಪವಿತ್ರ ನೀರನ್ನು ತಂದುಕೊಡುವ ಮೂಲಕ, ಕೈದಿಗಳಿಗೆ ಪವಿತ್ರಾ ಸ್ನಾನದಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಿಕೊಡಲಾಯಿತು.
ಅಧಿಕಾರಿಗಳ ಪ್ರಕಾರ, ಸಂಗಮ್ ತ್ರಿವೇಣಿ ನೀರನ್ನು ಸಾಮಾನ್ಯ ನೀರಿನೊಂದಿಗೆ ಬೆರೆಸಿ ಸಣ್ಣ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಲಾಗಿದೆ, ಕೈದಿಗಳಿಗೆ ಪವಿತ್ರ ಸ್ನಾನ ಮಾಡಲು ಮತ್ತು ಜೈಲಿನಲ್ಲಿಯೇ ಪ್ರಾರ್ಥನೆ ಸಲ್ಲಿಸಲು ಅನುವು ಮಾಡಿಕೊಡುತ್ತದೆ.
ಲಕ್ನೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುಪಿಯ ಜೈಲು ಸಚಿವ ದಾರಾ ಸಿಂಗ್ ಚೌಹಾಣ್, ಸುಮಾರು 90 ಸಾವಿರ ಕೈದಿಗಳಿಗೆ ಪವಿತ್ರ ಸ್ನಾನ ಮಾಡುವ ಅವಕಾಶವನ್ನು ನೀಡಲಾಗಿದೆ ಎಂದು ಹೇಳಿದರು.
ಸಾಮಾನ್ಯ ಜನರು ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಅವರ ನಂಬಿಕೆಯ ಹೊರತಾಗಿಯೂ ಜೈಲುವಾಸದಲ್ಲಿರುವವರು ನಾಲ್ಕು ಗೋಡೆಗಳಿಂದ ಹೊರಬರಲು ಸಾಧ್ಯವಿಲ್ಲ ಎಂಬ ದೃಷ್ಟಿಯಿಂದ ಕೈದಿಗಳ ಒತ್ತಾಯ ಮೇರೆಗೆ ಈ ಅವಕಾಶ ಕಲ್ಪಿಸಿಕೊಡಲಾಯಿತು.
ಜೈಲಿನ ಎಲ್ಲಾ ಹಿರಿಯ ಮತ್ತು ಕಿರಿಯ ಅಧಿಕಾರಿಗಳ ಬೆಂಬಲದೊಂದಿಗೆ, ಉತ್ತರ ಪ್ರದೇಶದ ಸುಮಾರು ತೊಂಬತ್ತು ಸಾವಿರ ಕೈದಿಗಳು ಪವಿತ್ರಾ ಸ್ನಾನ ಮಾಡಿದರು.