Select Your Language

Notifications

webdunia
webdunia
webdunia
webdunia

Agra: ಎರಡನೇ ತರಗತಿ ಮಗುವನ್ನು ಮರಕ್ಕೆ ಕಟ್ಟಿ ಹೊಡೆದ ಶಿಕ್ಷಕ

crime

Krishnaveni K

ಆಗ್ರಾ , ಶನಿವಾರ, 22 ಫೆಬ್ರವರಿ 2025 (14:43 IST)
ಆಗ್ರಾ: ಎರಡನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯನ್ನು ಮರಕ್ಕೆ ಕಟ್ಟಿ ಶಿಕ್ಷಕರೊಬ್ಬರು ಮನಬಂದಂತೆ ಹೊಡೆದ ಘಟನೆ ನಡೆದಿದೆ. ಇದೀಗ ಪೋಷಕರು ದೂರು ನೀಡಿದ್ದಾರೆ.

ಮೈನ್ ಪುರಿ ಪೊಲೀಸ್ ಠಾಣಾ ವ್ಯಾಪ್ತಿಯ ಸ್ವಾಮಿ ಅಮರ್ ಸ್ವರೂಪ್ ನಂದ್ ಜೀ ಶ್ರೀ ನಿಹಾಲ್ ಸಿಂಗ್ ಶಾಲೆಯಲ್ಲಿ ಘಟನೆ ನಡೆದಿದೆ. ಧ್ರುವ್ ಕುಮಾರ್ ಎಂಬ ಶಿಕ್ಷಕಿ ಆರೋಪಿ. ಸರಿಯಾಗಿ ಓದುತ್ತಿಲ್ಲ ಎಂಬ ಕಾರಣಕ್ಕೆ ಎರಡನೇ ತರಗತಿ ಮಗುವನ್ನು ಶಿಕ್ಷಕ ಧ್ರುವ್ ಕುಮಾರ್ ಮರಕ್ಕೆ ಕಟ್ಟಿ ಹಾಕಿದ್ದ.

ಬಳಿಕ ಕೋಲಿನಿಂದ ಮನಬಂದಂತೆ ಬಾರಿಸಿದ್ದ. ಪರಿಣಾಮ ಹುಡುಗನ ಮೈ ಮೇಲೆಲ್ಲಾ ಗಾಯಗಳಾಗಿವೆ.  ಮನೆಗೆ ಬಂದ ಮೇಲೆ ಬಾಲಕನ ಪರಿಸ್ಥಿತಿ ನೋಡಿ ಕಂಗಾಲಾದ ಪೋಷಕರು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆ ಬಗ್ಗೆ ಯಾರಿಗೂ ಹೇಳಬಾರದು, ಹೇಳಿದರೆ ಜೀವ ತೆಗೆಯುವುದಾಗಿ ಶಿಕ್ಷಕ ಬೆದರಿಕೆ ಹಾಕಿರುವುದಾಗಿ ಮಗು ಬಾಯ್ಬಿಟ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ: ಸಮಯ ಬಂದಾಗ ತೀರ್ಮಾನ ಎಂದ ಜಾರಕಿಹೊಳಿ