Select Your Language

Notifications

webdunia
webdunia
webdunia
webdunia

ತ್ರಿವೇಣಿ ಸಂಗಮದಲ್ಲಿ ಪವಿತ್ರಸ್ನಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

Prayagraj Maha Kumbh Mela

Sampriya

ಪ್ರಯಾಗ್‌ರಾಜ್ , ಸೋಮವಾರ, 10 ಫೆಬ್ರವರಿ 2025 (14:30 IST)
Photo Courtesy X
ಪ್ರಯಾಗ್‌ರಾಜ್: 144 ವರ್ಷಗಳ ಬಳಿಕ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಪಾಲ್ಗೊಂಡು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು.

ಪ್ರಯಾಗ್‌ರಾಜ್‌ಗೆ ಬಂದಿಳಿದ  ದ್ರೌಪದಿ ಮುರ್ಮು ಅವರನ್ನು ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಅವರು ಬರಮಾಡಿಕೊಂಡರು.  

ಉತ್ತರ ಪ್ರದೇಶದ ಪ್ರಯಾಗ್​ರಾಜ್​ಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಗಂಗಾ - ಯಮುನಾ - ಸರಸ್ವತಿ ನದಿ ಸೇರುವ ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದು, ಪ್ರಾರ್ಥನೆ ಸಲ್ಲಿಸಿದರು. ಪವಿತ್ರ ಸ್ನಾನಕ್ಕೂ ಮೊದಲು ತ್ರಿವೇಣಿ ಸಂಗಮದಲ್ಲಿರುವ ಹಕ್ಕಿಗಳಿಗೆ ಆಹಾರ ನೀಡಿದರು.

ರಾಷ್ಟçಪತಿ ದ್ರೌಪದಿ ಮುರ್ಮು 8 ಗಂಟೆಗಳ ಕಾಲ ಪ್ರಯಾಗ್‌ರಾಜ್‌ನಲ್ಲಿ ಸಮಯ ಕಳೆಯಲಿದ್ದಾರೆ. ಅಕ್ಷಯವತ್ ಹಾಗೂ ಹನುಮಾನ್ ಮಂದಿರಕ್ಕೆ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಡಿಜಿಟಲ್ ಕುಂಭ ಅನುಭವ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ.  

ಭಾನುವಾರ ತ್ರಿವೇಣಿ ಸಂಗಮದಲ್ಲಿ ಸುಮರು 8.4 ಕೋಟಿ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ಮಹಾ ಕುಂಭಮೇಳ ಶುರುವಾದಾಗಿನಿಂದ ಇಲ್ಲಿಯವರೆಗೆ 42 ಕೋಟಿಗೂ ಅಧಿಕ ಜನರು ತ್ರಿವೇಣಿಯಲ್ಲಿ ಮಿಂದೆದ್ದಿದ್ದಾರೆ.  ಜನವರಿ 13ರಂದು ಆರಂಭವಾದ ಮಹಾಕುಂಭ ಮೇಳ ಇದೇ ತಿಂಗಳು ಫೆಬ್ರವರಿ 26 ರ ಮಹಾಶಿವರಾತ್ರಿಯವರೆಗೆ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೋ ತಮ್ಮಾ ಮೆಟ್ರೊ ದರ ಏರಿಕೆ ಮಾಡಿದ್ದು ರಾಜ್ಯ ಸರ್ಕಾರ ಅಲ್ಲ: ಟ್ರೋಲ್ ಆದ ತೇಜಸ್ವಿ ಸೂರ್ಯ