Select Your Language

Notifications

webdunia
webdunia
webdunia
webdunia

ಬಜೆಟ್ ಗೆ ಮುಂಚಿತವಾಗಿಯೇ ಎಲ್ ಪಿಜಿ ಗ್ರಾಹಕರಿಗೆ ಗುಡ್ ನ್ಯೂಸ್

LPG Cylinder

Krishnaveni K

ನವದೆಹಲಿ , ಶನಿವಾರ, 1 ಫೆಬ್ರವರಿ 2025 (10:12 IST)
Photo Credit: X
ನವದೆಹಲಿ: ಇಂದು ಕೇಂದ್ರ ಬಜೆಟ್ 2025 ಮಂಡನೆಯಾಗಲಿದ್ದು ಇದಕ್ಕೆ ಮೊದಲು ಎಲ್ ಪಿಜಿ ಗ್ರಾಹಕರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ.

ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ ನಲ್ಲಿ ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್ ನಲ್ಲಿ ಮಧ್ಯಮವರ್ಗದ ಜನರಿಗೆ ಭಾರೀ ನಿರೀಕ್ಷೆಯಿದೆ. ಈ ನಡುವೆ ಇಂದು ಬೆಳ್ಳಂ ಬೆಳಿಗ್ಗೆಯೇ ಎಲ್ ಪಿಜಿ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ.

ಬಜೆಟ್ ಗೆ ಮುನ್ನ ವಾಣಿಜ್ಯ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಗಳ ಬೆಲೆಯನ್ನು 7 ರೂ.ಗಳಷ್ಟು ಇಳಿಕೆ ಮಾಡಿದೆ. ಜಾಗತಿಕವಾಗಿ ಕಚ್ಚಾ ತೈಲ ದರಗಳಲ್ಲಿ ಬದಲಾವಣೆಗಳು ಮತ್ತು ಇತರ ಅಂಶದ ಆಧಾರದ ಮೇಲೆ ತೈಲ ಕಂಪನಿಗಳು ನಿಯಮಿತವಾಗಿ ಎಲ್ ಪಿಜಿ ಬೆಲೆ ಪರಿಷ್ಕರಣೆ ಮಾಡಲಾಗುತ್ತದೆ.

ಇದೀಗ ರಾಷ್ಟ್ರ ರಾಜಧಾನಿಯಲ್ಲಿ ಸಿಲಿಂಡರ್ ನ ಚಿಲ್ಲರೆ ಮಾರಾಟ ಬೆಲೆ ಈಗ 1,797 ರೂ. ಗಳಷ್ಟಾಗಿದೆ. ಆದರೆ ಸದ್ಯಕ್ಕೆ ಅಡುಗೆ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಡಿಸೆಂಬರ್ ನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 62 ರೂ.ಗಳಷ್ಟು ಹೆಚ್ಚಿಸಿವೆ.


Share this Story:

Follow Webdunia kannada

ಮುಂದಿನ ಸುದ್ದಿ

Central Budget 2025 live: ಬಜೆಟ್ ಮಂಡನೆಗೆ ಮುನ್ನ ರಾಷ್ಟ್ರಪತಿ ಭವನದತ್ತ ಹೊರಟ ನಿರ್ಮಲಾ ಸೀತಾರಾಮನ್ (Video)