Select Your Language

Notifications

webdunia
webdunia
webdunia
webdunia

Central Budget 2025 live: ಬಜೆಟ್ ಮಂಡನೆಗೆ ಮುನ್ನ ರಾಷ್ಟ್ರಪತಿ ಭವನದತ್ತ ಹೊರಟ ನಿರ್ಮಲಾ ಸೀತಾರಾಮನ್ (Video)

Nirmala Sitharaman

Krishnaveni K

ನವದೆಹಲಿ , ಶನಿವಾರ, 1 ಫೆಬ್ರವರಿ 2025 (09:41 IST)
ನವದೆಹಲಿ: ಇಂದು ಕೇಂದ್ರ ಬಜೆಟ್ 2025 ರನ್ನು ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇದಕ್ಕೂ ಮುನ್ನ ರಾಷ್ಟ್ರಪತಿಗಳ ಅಂಕಿತ ಪಡೆಯಲು ರಾಷ್ಟ್ರಪತಿಭವನಕ್ಕೆ ತೆರಳಿದ್ದಾರೆ.

ಇಂದು ಮೋದಿ ಸರ್ಕಾರ ಮೂರನೇ ಅವಧಿಯ ಮೊದಲ ಪರಿಪೂರ್ಣ ಬಜೆಟ್ ಮಂಡನೆಯಾಗಲಿದೆ. ಈ ಬಜೆಟ್ ನಲ್ಲಿ ಮಧ್ಯಮ ವರ್ಗದವರ ಆರ್ಥಿಕ ಸ್ಥಿತಿ ಸುಧಾರಿಸಲು ಸಾಕಷ್ಟು ಕೊಡುಗೆಗಳನ್ನು ಇಡೀ ದೇಶವೇ ನಿರೀಕ್ಷೆ ಮಾಡುತ್ತಿದೆ.

ಈ ಮಹತ್ವದ ಬಜೆಟ್ ಮಂಡನೆಗೆ ಮುನ್ನ ನಿಯಮದಂತೆ ರಾಷ್ಟ್ರಪತಿಗಳ ಅಂಕಿತ ಪಡೆಯಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ. ಅದಾದ ಬಳಿಕ ಅವರು ಸಂಸತ್ ನತ್ತ ಆಗಮಿಸಲಿದ್ದಾರೆ.

ಇಂದು ಬೆಳಿಗ್ಗೆ 11 ಗಂಟೆಯಿಂದ ಸಂಸತ್ ನಲ್ಲಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ. ಇದಕ್ಕೂ ಮುನ್ನ ಬೆಳಿಗ್ಗೆ 10.25 ಕ್ಕೆ ಸಚಿವ ಸಂಪುಟ ನಡೆಯಲಿದ್ದು ಬಜೆಟ್ ಗೆ ಅನುಮೋದನೆ ಪಡೆಯಲಿದ್ದಾರೆ.  ಸತತ 8 ನೇ ಬಾರಿಗೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಇದನ್ನು ಸಂಸತ್ ಚಾನೆಲ್ ಗಳಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಯುಪಿಐ ಪಾವತಿಯಲ್ಲಿ ಈ ಬದಲಾವಣೆ ಜಾರಿ, ಗಮನಿಸಿ