Daily Horoscope

Select Your Language

Notifications

webdunia
webdunia
webdunia
webdunia

ಗರ್ಲ್ ಫ್ರೆಂಡ್ ಭೇಟಿಯಾಗಲು ಬುರ್ಕಾ ಧರಿಸುತ್ತಿದ್ದ ಪ್ರಿಯಕರ!?

ಬುರ್ಕಾ
ಲಕ್ನೋ : ಗೆಳತಿಯನ್ನು ಭೇಟಿಯಾಗಲು ಬುರ್ಕಾ ಧರಿಸಿ ಹೋಗುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿದ ಘಟನೆ ಉತ್ತರಪ್ರದೇಶದ ಮೆಹಮದ್ಪುರದಲ್ಲಿ ನಡೆದಿದೆ.

ಸೈಫ್ ಅಲಿ (25) ಬುರ್ಕಾ ಧರಿಸಿ ಪೊಲೀಸರಿಗೆ ಸಿಕ್ಕಿಬಿದ್ದ ವ್ಯಕ್ತಿಯಾಗಿದ್ದಾನೆ. ಈತನಿಗೆ ಬೇರೆ ಸ್ಥಳದಲ್ಲಿ ಕೆಲಸ ಸಿಕ್ಕಿತ್ತು. ಇದರಿಂದಾಗಿ ಊರಿನಿಂದ ಹೋಗುವ ಮೊದಲು ಗೆಳತಿಯನ್ನು ಒಮ್ಮೆ ಭೇಟಿಯಾಗಲು ಬಯಸಿದ್ದ.

ಆದರೆ ಮೆಹಮದ್ಪುರದಲ್ಲಿ ಹೆಚ್ಚು ಜನರು ಪರಿಚಯಸ್ಥರೇ ಇದ್ದಿದ್ದರಿಂದ ಆತ ಗೆಳತಿಯನ್ನು ಭೇಟಿ ಮಾಡುವಾಗ ಯಾರಾದರೂ ನೋಡಿ ಏನನ್ನಾದರೂ ಹೇಳುತ್ತಾರೆ ಎನ್ನುವ ಭಯದಿಂದ ತನ್ನ ಗುರುತನ್ನು ಮರೆಮಾಚಲು ಬುರ್ಕಾವನ್ನು ಧರಿಸುವ ಯೋಚನೆಯನ್ನು ಮಾಡಿಕೊಂಡ. 

ಸೈಫ್ ಅಲಿ ಮಾರನೇ ದಿನ ತನ್ನ ಯೋಚನೆಯಂತೆ ಗೆಳತಿಯನ್ನು ಭೇಟಿಯಾಗಲು ಬುರ್ಕಾ ಧರಿಸಿ ಹೋಗಿದ್ದ. ಆದರೆ ಅಲ್ಲಿದ್ದ ಸ್ಥಳೀಯರಿಗೆ ಬುರ್ಕಾ ಧರಿಸಿದವನು ಹುಡುಗ ಎಂದು ತಿಳಿದು ಏನೋ ತೊಂದರೆ ಮಾಡಲು ಬಂದಿದ್ದಾರೆ ಎನ್ನುವ ಅನುಮಾನ ಬಂದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸ್ವಿಗ್ಗಿ ವಿರುದ್ಧ ದೂರು!