Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟಿಗೆ 10 ವರ್ಷ ಜೈಲು

Crime
ನಟ ಸುಶಾಂತ್ ಸಿಂಗ್ ರಜಪೂತ್ ರಿಯಾ ಚಕ್ರವರ್ತಿಯ ಬಾಯ್​ಫ್ರೆಂಡ್ ಆಗಿದ್ದರು. ಆದರೆ ಅವರು 2020 ರಲ್ಲಿ ನಿಧನರಾಗಿದ್ದರು. ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ಅನುಮಾನಗಳ ಹುತ್ತವೇ ಬೆಳೆದು ನಿಂತಿದೆ.
 
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಸಲ್ಲಿಸಿದ ಆರೋಪಪಟ್ಟಿಯಲ್ಲಿ ನಟಿ ರಿಯಾ ಚಕ್ರವರ್ತಿ ಮತ್ತು ಇತರ 34 ಮಂದಿಯನ್ನು ಹೈ-ಪ್ರೊಫೈಲ್ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ.
 
ಗಾಂಜಾ ಖರೀದಿಗೆ ಹಣದ ಸಹಾಯ?
ರಿಯಾ ಚಕ್ರವರ್ತಿ ಅವರ ಮೇಲೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಣ್ಣ ಪ್ರಮಾಣದ ಗಾಂಜಾವನ್ನು ಖರೀದಿಸಿದ ಆರೋಪ ಮಾಡಿದೆ. ಅಲ್ಲದೇ ಗಾಂಜಾ ಖರೀದಿಗೆ ಹಣದ ಸಹಾಯ ಒದಗಿಸಿದ ಆರೋಪವನ್ನು ಹೊರಿಸಲಾಗಿದೆ. ರಿಯಾ ಚಕ್ರವರ್ತಿಯ ಸಹೋದರ ಶೋಕ್ ಚಕ್ರವರ್ತಿಯನ್ನೂ ಸಹ ಆರೋಪಿ ಎಂದು ಹೆಸರಿಸಲಾಗಿದೆ. ರಿಯಾ ಚಕ್ರವರ್ತಿ ತನ್ನ ಬಾಯ್​ಫ್ರೆಂಡ್ ಸುಶಾಂತ್ ಸಿಂಗ್‌ಗೆ ಗಾಂಜಾವನ್ನು ತಲುಪಿಸಿದ್ದಾಳೆ ಎಂದು ಎನ್‌ಸಿಬಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.
 
10 ವರ್ಷ ಜೈಲು?
ಒಂದುವೇಳೆ ಈ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ತಪ್ಪಿತಸ್ಥರೆಂದು ಸಾಬೀತಾದರೆ 10 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿನಿಂದ ಬಾಹರ್ ಮರದ ಮೇಲೆ ಅಂದರ್