Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಮಳೆ ಹೆಚುವರಿ ಪರಿಹಾರಕ್ಕೆ ಸರ್ಕಾರ ಪರಿಹಾರ

Crime
ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಆಗಿರುವ ಹಾನಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರ ನಿಗದಿಪಡಿಸಿ ಆದೇಶ ಹೊರಡಿಸಿದೆ.
 
ಹೌದು.. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ
ಬೆನ್ನಲ್ಲೇ ರಾಜ್ಯದಲ್ಲಿ ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಈ ಬಾರಿಯೂ ಕೇಂದ್ರ ಸರ್ಕಾರದ ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿಗಿಂತ ಹೆಚ್ಚುವರಿ ಪರಿಹಾರ ನಿಗದಿ ಪಡಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
 
ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿ ದರ ಮತ್ತು ಪರಿಷ್ಕೃತ ದರ ಹೀಗಿದೆ.
* ಮಾನವ ಜೀವಹಾನಿಗೆ ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿ ದರ 4 ಲಕ್ಷ ರೂ. ಇದ್ದು, ಪರಿಷ್ಕೃತ ದರ 5 ಲಕ್ಷ ರೂ ನಿಗದಿಪಡಿಸಿದೆ.
* ಪ್ರವಾಹ ನೀರು ನುಗ್ಗಿರುವ ಮನೆಗಳು ಗೃಹೋಪಯೋಗಿ ವಸ್ತುಗಳು ಹಾಗೂ ಬಟ್ಟೆ ಬರೆ ಹಾನಿಗೆ ರೂ 3,800 (ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿ ದರ), ಪರಿಷ್ಕೃತ ದರ 10,000 ರೂ.
* ಶೇ 75ಕ್ಕಿಂತ ಹೆಚ್ಚು ಸಂಪೂರ್ಣ ಹಾನಿ ಎಂ ವರ್ಗಕ್ಕೆ 95,೧೦೦ (ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿ ದರ), ಪರಿಷ್ಕೃತ ದರ 5 ಲಕ್ಷ ರೂ.
* ಶೇ. 25 ರಿಂದ ಶೇ 75ರಷ್ಟು ತೀವ್ರ ಮನೆಹಾನಿ (ಕೆಡವಿ ಹೊಸದಾಗಿ ನಿರ್ಮಿಸುವುದು) ಬಿ೨ ವರ್ಗಕ್ಕೆ 95,೧೦೦ (ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿ ದರ), ಪರಿಷ್ಕೃತ ದರ ೫ ಲಕ್ಷ ರೂ.
* ಶೇ. 25 ರಿಂದ ಶೇ 75ರಷ್ಟು ತೀವ್ರ ಮನೆಹಾನಿ (ದುರಸ್ಥಿ), ಬಿ1 ವರ್ಗಕ್ಕೆ 95,೧೦೦ (ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿ ದರ), ಪರಿಷ್ಕೃತ ದರ 3 ಲಕ್ಷ ರೂ.
* ಶೇ. 15 ರಿಂದ 25ರಷ್ಟು ಭಾಗಶಃ ಮನೆ ಹಾನಿ ಸಿ ವರ್ಗಕ್ಕೆ 5200 ರೂ. (ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿ ದರ), ಪರಿಷ್ಕೃತ ದರ 50 ಸಾವಿರ ರೂ.

Share this Story:

Follow Webdunia kannada

ಮುಂದಿನ ಸುದ್ದಿ

ಸಮುದ್ರದ ದಡದಲ್ಲಿ ಸೆಲ್ಫಿ ಕ್ರೇಜ್ 8 ಮಂದಿ ಕೊಚ್ಚಿ ಹೋದ ಹೃದಯವಿದ್ರಾಕ ಘಟನೆ