Select Your Language

Notifications

webdunia
webdunia
webdunia
webdunia

ಬಾಲಕಿಯನ್ನು ಲೈಂಗಿಕ ಸಂಬಂಧಕ್ಕೆ ಪ್ರಚೋದಿಸಿದ ತೃತೀಯಲಿಂಗಿ!

ಬಾಲಕಿಯನ್ನು ಲೈಂಗಿಕ ಸಂಬಂಧಕ್ಕೆ ಪ್ರಚೋದಿಸಿದ ತೃತೀಯಲಿಂಗಿ!
ಲಂಡನ್ , ಭಾನುವಾರ, 31 ಜುಲೈ 2022 (11:14 IST)
ಲಂಡನ್ : ನಕಲಿ ಶಿಶ್ನ ಬಳಸಿ ಇಬ್ಬರು ಮಹಿಳೆಯರು ಹಾಗೂ ಹದಿಹರೆಯದ ಬಾಲಕಿಯನ್ನು ಲೈಂಗಿಕ ಸಂಬಂಧಕ್ಕೆ ಪ್ರಚೋದಿಸಿದ ಹಾಗೂ ಲೈಂಗಿಕ ಸಂಪರ್ಕ ನಡೆಸಿದ,
 
ತೃತೀಯಲಿಂಗಿಗೆ ಲಂಡನ್ನಲ್ಲಿರುವ ಸ್ನಾರೆಸ್ ಬ್ರೂಕ್ ಕ್ರೌನ್ ಕೋರ್ಟ್ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಹನ್ನಾ ವಾಲ್ಟರ್ಸ್ ಎಂಬ ವ್ಯಕ್ತಿ ಹೆಣ್ಣಾಗಿ ಹುಟ್ಟಿ ತಾನು ತರ್ಜಿತ್ ಸಿಂಗ್ (32) ಪುರುಷ ಎಂದು ಗುರುತಿಸಿಕೊಂಡಿದ್ದ. ಈತ ಸಂಭೋಗದ ಸಮಯದಲ್ಲಿ ಬಟ್ಟೆ ಧರಿಸುತ್ತಿದ್ದ. ಕತ್ತಲಿನ ಸಮಯದಲ್ಲಿ ನಕಲಿ ಶಿಶ್ನ ಬಳಸಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ.

ವಿಚಾರಣೆಯ ನಂತರ ತರ್ಜಿತ್ ಸಿಂಗ್ಗೆ ದೈಹಿಕ ಹಾನಿ ಮತ್ತು ಕೊಲೆ ಬೆದರಿಕೆ ಆರೋಪದ ಮೇಲೆ ಕೋರ್ಟ್ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಭವಿಷ್ಯದಲ್ಲಿ ಸಿಂಗ್ನಿಂದ ಸಾರ್ವಜನಿಕರಿಗೆ ಗಂಭೀರವಾಗಿ ಹಾನಿಯಾಗುವ ಅಪಾಯವಿದೆ. ಮೂವರು ಸಂತ್ರಸ್ತೆಯರ ವಿರುದ್ಧ ಪದೇ-ಪದೇ ಹಿಂಸಾಚಾರ ಮತ್ತು ಹಲ್ಲೆ ಮಾಡಿದ್ದಾನೆ. ಈತ ಅಪಾಯಕಾರಿ ಅಪರಾಧಿ ಹಾಗೂ ಸುಳ್ಳುಗಾರ.

ಪ್ರಾಮಾಣಿಕವಾಗಿ ಸಂಭಾಷಣೆ ನಡೆಸುವ ಬದಲು ಮೋಸದ ಮಾರ್ಗ ಆಯ್ಕೆ ಮಾಡಿಕೊಂಡಿದ್ದಾನೆ ಹಾಗಾಗಿ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಧೀಶ ಆಸ್ಕರ್ ಡೆಲ್ ಫ್ಯಾಬ್ರೊ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫ್ರೈಡ್‍ ರೈಸ್‍ನಲ್ಲಿ ಜಿರಳೆ ಪತ್ತೆ!