Select Your Language

Notifications

webdunia
webdunia
webdunia
webdunia

ಗರ್ಲ್ ಫ್ರೆಂಡ್ ಕೊಂದು ಮೂರು ತಿಂಗಳು ದೇಹ ಹೂತಿಟ್ಟ ಪಾಗಲ್ ಪ್ರೇಮಿ

ಗರ್ಲ್ ಫ್ರೆಂಡ್ ಕೊಂದು ಮೂರು ತಿಂಗಳು ದೇಹ ಹೂತಿಟ್ಟ ಪಾಗಲ್ ಪ್ರೇಮಿ
ಮುಂಬೈ , ಭಾನುವಾರ, 17 ಜನವರಿ 2021 (09:42 IST)
ಮುಂಬೈ: ತನ್ನ ಪ್ರಿಯತಮೆಯನ್ನು ಹತ್ಯೆ ಮಾಡಿ ಪಾಗಲ್ ಪ್ರೇಮಿಯೊಬ್ಬ ಆಕೆಯ ಮೃತದೇಹವನ್ನು ಮೂರು ತಿಂಗಳ ಕಾಲ ಜೊತೆಯಲ್ಲೇ ಇಟ್ಟುಕೊಂಡು ಕಾಲ ಕಳೆದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.


34 ವರ್ಷದ ಆರೋಪಿ 32 ವರ್ಷದ ಯುವತಿಯನ್ನು ಹತ್ಯೆ ಮಾಡಿದ್ದ.  ತನ್ನ ಮನೆಯ ಬಾತ್ ರೂಂನಲ್ಲೇ ದೇಹವಿರಿಸಿದ್ದ. ಪೊಲೀಸರ ಪ್ರಕಾರ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಯುವಕನ ಮನೆಯವರ ಒಪ್ಪಿಗೆಯೂ ಇತ್ತು. ಆದರೆ ಯುವತಿ ಮನೆಯವರಿಗೆ ಒಪ್ಪಿಗೆ ಇರಲಿಲ್ಲ. ಮದುವೆ ಶಾಪಿಂಗ್ ಗೆಂದು ಹೋಗಿದ್ದ ಯುವತಿ ಮನೆಗೆ ಮರಳಿರಲಿಲ್ಲ. ಈ ಬಗ್ಗೆ ಕರೆ ಮಾಡಿದರೂ ಪ್ರತಿಕ್ರಿಯಿಸಿರಲಿಲ್ಲ. ಹೀಗಾಗಿ ಯುವಕನ ಮೇಲೆ ಸಂಶಯಗೊಂಡ ಯುವತಿ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ವಿಚಾರಣೆ ನಡೆಸಿದಾಗ ಆರೋಪಿಯ ಕೃತ್ಯ ಬೆಳಕಿಗೆ ಬಂದಿತ್ತು. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಲೈಂಗಿಕ ದೌರ್ಜನ್ಯ, ಬ್ಲ್ಯಾಕ್ ಮೇಲ್