Publish Date: Fri, 15 Jan 2021 (10:29 IST)
Updated Date: Fri, 15 Jan 2021 (10:31 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಆದಿತ್ಯಾ ಆಳ್ವಾಗೆ ಡೋಪಿಂಗ್ ಟೆಸ್ಟ್ ನಡೆಸಲಾಗಿದೆ.
ಡ್ರಗ್ ಸೇವನೆ ದೃಢಪಡಿಸಲು ಸಿಸಿಬಿ ಪೊಲೀಸರು ಅವರ ತಲೆಕೂದಲು, ಉಗುರು, ಮೂತ್ರ ಮತ್ತು ರಕ್ತದ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಇದರ ವರದಿ ಎರಡು ತಿಂಗಳ ಬಳಿಕವಷ್ಟೇ ಪೊಲೀಸರ ಕೈ ಸೇರಲಿದೆ. ಇದಕ್ಕೂ ಮೊದಲು ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ಇತರ ಆರೋಪಿಗಳಿಗೂ ಡೋಪಿಂಗ್ ಪರೀಕ್ಷೆ ನಡೆಸಲಾಗಿತ್ತು. ಆ ವರದಿಯೂ ಇನ್ನೂ ಪೊಲೀಸರ ಕೈ ಸೇರಿಲ್ಲ.