Select Your Language

Notifications

webdunia
webdunia
webdunia
webdunia

ಲಾಲೂ ಜತೆಗೆ ಜೈಲಿನಲ್ಲಿ ಕಳೆಯಲು ಸಹಾಯಕರು ಮಾಡಿದ ಮಾಸ್ಟರ್ ಪ್ಲ್ಯಾನ್ ಏನು ಗೊತ್ತಾ?!

ಲಾಲೂ ಜತೆಗೆ ಜೈಲಿನಲ್ಲಿ ಕಳೆಯಲು ಸಹಾಯಕರು ಮಾಡಿದ ಮಾಸ್ಟರ್ ಪ್ಲ್ಯಾನ್ ಏನು ಗೊತ್ತಾ?!
ನವದೆಹಲಿ , ಬುಧವಾರ, 10 ಜನವರಿ 2018 (08:31 IST)
ನವದೆಹಲಿ: ಮೇವು ಹಗರಣದಲ್ಲಿ ಮೂರೂವರೆ ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಜತೆಗೆ ಕಳೆಯಲು ಅವರ ಸಹಾಯಕರೂ ಪಕ್ಕಾ ಯೋಜನೆ ರೂಪಿಸಿ ಜೈಲು ಸೇರಿಕೊಂಡಿದ್ದಾರೆ. ಇದು ಯಾವ ಸಿನಿಮಾ ಕತೆಗೂ ಕಮ್ಮಿಯಿಲ್ಲ!
 

ತಮ್ಮ ನಾಯಕನಿಗೆ ಜೈಲಿನಲ್ಲೂ ಚಾಕರಿ ಮಾಡಲು ಲಕ್ಷ್ಮಣ್ ಮಹತೋ ಮತ್ತು ಮದನ್ ಯಾದವ್ ಎಂಬ ಇಬ್ಬರು ಸಹಾಯಕರು ಕಳ್ಳತನದ ಕೇಸು ದಾಖಲಿಸಿಕೊಂಡು, ತಾವೇ ಪೊಲೀಸರಿಗೆ ಶರಣಾಗತಿಯಾಗಿ ಲಾಲೂ ಜೈಲು ಸೇರುವ ಕೆಲವೇ ಗಂಟೆಗಳ ಮೊದಲು ರಾಂಚಿಯ ಜೈಲಿನೊಳಗೆ ಸೇರಿಕೊಂಡಿದ್ದರು!

ಇವರಿಬ್ಬರು ರಾಂಚಿಯ ಒಂದು ಪೊಲೀಸ್ ಠಾಣೆಯಲ್ಲಿ ಶರಣಾಗತಿಯಾಗಲು ಹೋದಾಗ ಪೊಲೀಸರು ಪ್ರಕರಣ ದಾಖಲಿಸಲು ಒಪ್ಪಿರಲಿಲ್ಲ. ಹೀಗಾಗಿ ಇಬ್ಬರೂ ಇನ್ನೊಂದು ಠಾಣೆಗೆ ತೆರಳಿ ತಪ್ಪೊಪ್ಪಿಕೊಂಡು ಕೇಸು ಹಾಕಿಸಿಕೊಂಡಿದ್ದಾರೆ! ಆ ಮೂಲಕ ಜೈಲಿನಲ್ಲೂ ತಮ್ಮ ನೇತಾರನಿಗೆ ಜತೆಯಾಗಲು ತೀರ್ಮಾನಿಸಿದ್ದಾರೆ. ಭಾರತದ ರಾಜಕೀಯದಲ್ಲಿ ಏನೂ ಆಗಬಹುದು ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಸರ್ಕಾರ ದೇಶಕ್ಕೆ ದೊಡ್ಡ ಕಂಟಕ- ಜಿಗ್ನೇಶಮೇವಾನಿ