Select Your Language

Notifications

webdunia
webdunia
webdunia
webdunia

ಜೈಲಲ್ಲಿ ನೆಗಡಿಯಾಗ್ತಿದೆ ಎಂದು ದೂರಿದ ಲಾಲೂ ಪ್ರಸಾದ್ ಯಾದವ್ ಗೆ ನ್ಯಾಯಾಧೀಶರು ಕೊಟ್ಟ ಉತ್ತರವೇನು ಗೊತ್ತಾ?

ಜೈಲಲ್ಲಿ ನೆಗಡಿಯಾಗ್ತಿದೆ ಎಂದು ದೂರಿದ ಲಾಲೂ ಪ್ರಸಾದ್ ಯಾದವ್ ಗೆ ನ್ಯಾಯಾಧೀಶರು ಕೊಟ್ಟ ಉತ್ತರವೇನು ಗೊತ್ತಾ?
ನವದೆಹಲಿ , ಶುಕ್ರವಾರ, 5 ಜನವರಿ 2018 (08:33 IST)
ನವದೆಹಲಿ: ಬಹುಕೋಟಿ ಮೇವು ಹಗರಣದ ಆರೋಪದಲ್ಲಿ ಜೈಲು ಪಾಲಾಗಿರುವ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಎದುರು ತನಗೆ ಜೈಲಲ್ಲಿ ನೆಗಡಿಯಾಗ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
 

‘ಸರ್ ನಂಗೆ ಜೈಲಲ್ಲಿ ತುಂಬಾ ಚಳಿಯಾಗ್ತಿದೆ. ಯಾರ ಜತೆಗೂ ನನಗೆ ಭೇಟಿಗೆ ಅವಕಾಶ ನೀಡಲಾಗುತ್ತಿಲ್ಲ’ ಎಂದು ಲಾಲೂ ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ ನ್ಯಾಯಾಧೀಶರೂ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ.

‘ಶೀತ ಎನಿಸಿದರೆ ತಬಲಾ ಅಥವಾ ಹಾರ್ಮೋನಿಯಂ ಬಾರಿಸಿ. ಚಳಿಯೆಲ್ಲಾ ಓಡಿ ಹೋಗುತ್ತದೆ. ಇನ್ನು, ನಿಮಗೆ ಯಾರನ್ನೂ ಭೇಟಿಯಾಗಲು ಅವಕಾಶ ಸಿಗುತ್ತಿಲ್ಲ ಎಂಬ ಕಾರಣಕ್ಕೇ ನ್ಯಾಯಾಲಯಕ್ಕೆ ಕರೆತರಲಾಗುತ್ತದೆ’ ಎಂದು ನ್ಯಾಯಾಧೀಶರು ತಿರುಗೇಟು ನೀಡಿದ್ದಾರೆ.

ಮೇವು ಹಗರಣದಲ್ಲಿ ಆರೋಪಿ ಎಂದು ಸಾಬೀತಾಗಿ ರಾಂಚಿ ಜೈಲಿನಲ್ಲಿರುವ ಲಾಲೂ ಯಾದವ್ ಗೆ ಇಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಅದಕ್ಕಾಗಿ ಅವರು ಇಂದು ವಿಶೇಷ ನ್ಯಾಯಾಯಲದ ಎದುರು ಹಾಜರಾಗಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ಕೊರಿಯಾ ಸರ್ವಾಧಿಕಾರಿಯನ್ನು ಹೊಗಳಿ ವಿವಾದಕ್ಕೀಡಾದ ಕೇರಳ ಸಿಎಂ