Select Your Language

Notifications

webdunia
webdunia
webdunia
webdunia

ಮೋದಿ ಸರ್ಕಾರ ದೇಶಕ್ಕೆ ದೊಡ್ಡ ಕಂಟಕ- ಜಿಗ್ನೇಶಮೇವಾನಿ

ಮೋದಿ ಸರ್ಕಾರ ದೇಶಕ್ಕೆ ದೊಡ್ಡ ಕಂಟಕ- ಜಿಗ್ನೇಶಮೇವಾನಿ
ನವದೆಹಲಿ , ಬುಧವಾರ, 10 ಜನವರಿ 2018 (08:21 IST)

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ದೊಡ್ಡ ಕಂಟಕವಾಗಿದೆ ಎಂದು ಗುಜರಾತ್ಶಾಸಕ ಜಿಗ್ನೇಶ್ಮೆವಾನಿ ಆರೋಪಿಸಿದ್ದಾರೆ.

ಯುವ ಹೂಂಕಾರ ರಾಲಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಲವ್ ಜಿಹಾದ್, ಗೋಹತ್ಯೆಯಂತಹ ವಿಚಾರಗಳಿಂದ ದೇಶದ ಜ್ವಲಂತ ಸಮಸ್ಯೆಗಳು ಹಿನ್ನೆಲೆಗೆ ಹೋಗಿವೆ. ಇದರ ವಿರುದ್ಧ ಧ್ವನಿ ಎತ್ತುವುದು ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವ ಮೂಲಕ ಜನಪ್ರತಿನಿಧಿಯ ಮಾತನಾಡುವ ಹಕ್ಕನ್ನು ಕಸಿದುಕೊಳ್ಳಲಾಗಿದ್ದು, ಇದು ಗುಜರಾತ್ಮಾದರಿಯ ರಾಜಕಾರಣವಾಗಿದೆ. ಗುಜರಾರಿನಲ್ಲಿ ಬಿಜೆಪಿಯ ಅಹಂಕಾರ ಮುರಿದಿದ್ದಕ್ಕೆ ಹಾರ್ದಿಕ್ ಪಟೇಲ್, ಅಲ್ಪೇಶ್ ಠಾಕೂರ ಹಾಗೂ ನನ್ನ ಮೇಲೆ ಬಿಜೆಪಿ ಕಣ್ಣಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಸಿ.ಪಿ. ಯೋಗಿಶ್ವರ್ ವಿರುದ್ಧ ಅನಿತಾ ಕುಮಾರಸ್ವಾಮಿ ಸ್ಪರ್ಧೆ-ಓಕೆ ಎಂದರು ಕುಮಾರಸ್ವಾಮಿ