Publish Date: Fri, 05 Jan 2018 (09:42 IST)
Updated Date: Fri, 05 Jan 2018 (09:50 IST)
ಮಂಗಳೂರು: ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ದೀಪಕ್ ರಾವ್ ಕುಟುಂಬಕ್ಕೆ ಸಾಂತ್ವನ ಹೇಳಲು ಬಾರದ ಸ್ಥಳೀಯ ಶಾಸಕ ಮೊಯಿದ್ದೀನ್ ಬಾವಾ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಂತ್ವನ ಹೇಳಲು ಬಾರದ ಶಾಸಕ ಇದೀಗ ಪರಿಹಾರದ ಮೊತ್ತ ಎಂದು ಶಾಸಕರು ವೈಯಕ್ತಿವಾಗಿ ಐದು ಲಕ್ಷ ರೂ.ಗಳನ್ನು ಘೋಷಿಸಿದ್ದು, ಅದನ್ನು ಸ್ವೀಕರಿಸದೇ ಇರಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಆದರೆ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶಾಸಕರು ‘ಇಂದು ದೀಪಕ್ ಮನೆಗೆ ತೆರಳಿ ಸಾಂತ್ವನ ಹೇಳುತ್ತೇನೆ. ಐದು ಲಕ್ಷ ರೂ.ಗಳ ಚೆಕ್ ಖುದ್ದಾಗಿ ನೀಡುತ್ತೇನೆ. ಅದನ್ನು ಸ್ವೀಕರಿಸುವಂತೆ ಮನ ಒಲಿಸುತ್ತೇನೆ’ ಎಂದು ಶಾಸಕ ಬಾವಾ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ