Waqf Bill ಬಗ್ಗೆ ಹೇಳಿದ್ದ ಲಾಲೂ ಪ್ರಸಾದ್ ಯಾದವ್ ಹಳೇ ವಿಡಿಯೋ ಒಂದು ಈಗ ವೈರಲ್

Krishnaveni K
ಗುರುವಾರ, 3 ಏಪ್ರಿಲ್ 2025 (10:58 IST)
ನವದೆಹಲಿ: ನಿನ್ನೆ ತಡರಾತ್ರಿ ಲೋಕಸಭೆಯಲ್ಲಿ ವಕ್ಫ್ ಬಿಲ್ ಪಾಸ್ ಮಾಡಲಾಗಿದೆ. ಆದರೆ ಇದರ ಬಗ್ಗೆ ವಿವಾದಗಳಿರುವಾಗಲೇ ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ವಕ್ಫ್ ಕಾಯಿದೆ ತಿದ್ದುಪಡಿ ಬಗ್ಗೆ ಹೇಳಿರುವ ಹಳೇ ವಿಡಿಯೋವೊಂದು ವೈರಲ್ ಆಗಿದೆ.

ಆರ್ ಜೆಡಿ ಈಗ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷವಾಗಿದೆ. ಈ ಪಕ್ಷವೂ ಈಗ ವಕ್ಫ್ ತಿದ್ದುಪಡಿ ಬಿಲ್ ನ್ನು ವಿರೋಧಿಸುತ್ತಿದೆ. ಆದರೆ ಈ ಹಿಂದೆ ಲಾಲೂ ಪ್ರಸಾದ್ ಯಾದವ್ ಸಂಸತ್ತಿನಲ್ಲೇ ನೀಡಿರುವ ಹೇಳಿಕೆಯೊಂದು ಈಗ ವೈರಲ್ ಆಗಿದೆ.

ಸಂಸತ್ ನಲ್ಲಿ ಲಾಲೂ ಪ್ರಸಾದ್ ಯಾದವ್, ವಕ್ಫ್ ಕಾಯಿದೆಗೆ ತಿದ್ದುಪಡಿ ತರಬೇಕಿದೆ ಎಂದು ಭಾಷಣ ಮಾಡಿದ್ದರು. ವಕ್ಫ್ ಬೋರ್ಡ್ ಸರ್ಕಾರದ ಆಸ್ತಿಯನ್ನೂ ತನ್ನದು ಎಂದು ವಶಪಡಿಸಿಕೊಂಡಿದೆ. ಇದರ ವಿರುದ್ಧ ಕಠಿಣ ಕಾನೂನು ಮಾಡಬೇಕು ಎಂದು ಭಾಷಣ ಮಾಡಿದ್ದರು. ಅವರ ಈ ಭಾಷಣ ಈಗ ವೈರಲ್ ಆಗಿದೆ.

ಈ ಭಾಷಣ ಅವರು 2010 ರಲ್ಲಿ ಪಾರ್ಲಿಮೆಂಟ್ ನಲ್ಲಿ ಮಾಡಿದ ಭಾಷಣವಾಗಿದೆ. ಆಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಆಗ ಸರಿ ಎನಿಸಿದ್ದು ಆರ್ ಜೆಡಿಗೆ ಈಗ ತಪ್ಪು ಎನಿಸುತ್ತಿದೆಯಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಿಮ್ಮ ನೆರೆಹೊರೆಯಲ್ಲಿರುವ ಸಾಬರ ಬಗ್ಗೆಯೂ ಎಚ್ಚರಿಕೆಯಿಂದಿರಿ: ಪ್ರತಾಪ್ ಸಿಂಹ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ನನ್ನ ಮಗಳು ಹಾಗೆಲ್ಲಾ ಮಾಡಲ್ಲ: ಉಗ್ರ ಮಹಿಳಾ ನಾಯಕಿ ಡಾ ಶಾಹೀನ್ ತಂದೆಯ ವಾದ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಬಸವನಗುಡಿ ಕಡಲೆಕಾಯಿ ಪರಿಷೆ ಯಾವಾಗ ಆರಂಭ, ಈ ಬಾರಿ ಹೊಸ ನಿಯಮವೇನು ಇಲ್ಲಿದೆ ವಿವರ

ಮುಂದಿನ ಸುದ್ದಿ
Show comments