Select Your Language

Notifications

webdunia
webdunia
webdunia
webdunia

ಗಿಫ್ಟ್ ನೀಡೋ ನೆಪದಲ್ಲಿ ಲಕ್ಷಗಟ್ಟಲೇ ವಂಚನೆ !

ಗಿಫ್ಟ್ ನೀಡೋ ನೆಪದಲ್ಲಿ ಲಕ್ಷಗಟ್ಟಲೇ ವಂಚನೆ !
ಮುಂಬೈ , ಶನಿವಾರ, 29 ಅಕ್ಟೋಬರ್ 2022 (08:11 IST)
ಮುಂಬೈ : ಫೇಸ್ಬುಕ್ನಲ್ಲಿ ಪರಿಚಯವಾದ ವಿದೇಶಿ ಜೋಡಿಯೊಂದು ಗಿಫ್ಟ್ ನೀಡುವ ನೆಪದಲ್ಲಿ ಮಹಿಳೆಯೊಬ್ಬರಿಗೆ 18.15 ಲಕ್ಷ ರೂಪಾಯಿ ವಂಚಿಸಿರುವುದಾಗಿ ಥಾಣೆ ನಗರ ಪೊಲೀಸರು ತಿಳಿಸಿದ್ದಾರೆ.

ಜನವರಿ ತಿಂಗಳಿನಲ್ಲಿ 48 ವರ್ಷದ ಮಹಿಳೆಗೆ ಫೇಸ್ಬುಕ್ನಲ್ಲಿ ವ್ಯಕ್ತಿ ಹಾಗೂ ಮಹಿಳೆ ರಿಕ್ವೆಸ್ಟ್ ಕಳುಹಿಸಿದ್ದರು. ಜೊತೆಗೆ ಇಬ್ಬರು ಲಂಡನ್ ಮೂಲದ ನರಶಸ್ತ್ರಚಿಕಿತ್ಸಕರು ಎಂದು ಹೇಳಿಕೊಂಡಿದ್ದರು.

ನಂತರ ಆಗಸ್ಟ್ನಲ್ಲಿ ಇಬ್ಬರೂ ಸೇರಿ ಮಹಿಳೆಗೆ ದುಬಾರಿ ಉಡುಗೊರೆಯನ್ನು ಕಳುಹಿಸಿರುವುದಾಗಿ ಮಹಿಳೆಗೆ ಸಂದೇಶ ಕಳುಹಿಸಿದ್ದಾರೆ. ಆದರೆ ಅದನ್ನು ಕಸ್ಟಮ್ಸ್ನಿಂದ ತೆರವುಗೊಳಿಸಲು ಸ್ವಲ್ಪ ಹಣವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂಡಿಗೋ ವಿಮಾನದಲ್ಲಿ ಬೆಂಕಿ! ದೆಹಲಿಯಲ್ಲಿ ಹಾರಾಟ ರದ್ದು