ನವದೆಹಲಿ: 16 ವರ್ಷದ ಅಪ್ರಾಪ್ತೆಯನ್ನು ಕೊಲೆ ಮಾಡಿದ್ದ ಪ್ರಿಯಕರ ಆಕೆಯ ಮೃತದೇಹವನ್ನು ತನ್ನ ಮನೆಯಲ್ಲಿಯೇ ಹೂತು ಹಾಕಿದ್ದ. ಆದರೆ ಇದೀಗ ಎರಡು ವರ್ಷಗಳ ಬಳಿಕ ಆರೋಪಿಗಳು ಅರೆಸ್ಟ್ ಆಗಿದ್ದಾರೆ.
ಯುವತಿಯ ಪೋಷಕರು ದೂರು ನೀಡಿದ್ದರೂ ಪ್ರಕರಣ ನೆನೆಗುದಿಗೆ ಬಿದ್ದಿತ್ತು. ಇತ್ತೀಚೆಗೆ ಹೊಸದಾಗಿ ನೇಮಕಗೊಂಡಿದ್ದ ಎಸ್ಎಸ್ಪಿ ಆಶಿಶ್ ತಿವಾರಿ ಎಂಬವರು ಹಳೇ ಕಡತಗಳ ವಿಲೇವಾರಿ ಮಾಡುವಾಗ ಈ ಪ್ರಕರಣ ಅವರ ಕಣ್ಣಿಗೆ ಬಿದ್ದಿದೆ. ಅದರಂತೆ ತಕ್ಷಣವೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಆದೇಶಿಸಿದ್ದಾರೆ.
ಅದರಂತೆ ತನಿಖೆ ನಡೆಸಿದ ಪೊಲೀಸರು ಪ್ರಿಯಕರನ ತಂದೆಯನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದಾಗ ಕುಟುಂಬ ಸದಸ್ಯರ ಸಹಾಯದಿಂದಲೇ ಆರೋಪಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಬಳಿಕ ತನ್ನದೇ ಮನೆಯಲ್ಲಿ ಆರೋಪಿ ಮೃತದೇಹ ಮಣ್ಣು ಮಾಡಿದ್ದ. ಇದೀಗ ಪೊಲೀಸರು ಮಣ್ಣು ಅಗೆದು ಮೃತದೇಹದ ಅವಶೇಷಗಳನ್ನು ಹೊರತೆಗೆದಿದ್ದಾರೆ.
-Edited by Rajesh Patil