Publish Date: Sun, 09 Oct 2022 (08:40 IST)
Updated Date: Sun, 09 Oct 2022 (08:52 IST)
ನವದೆಹಲಿ: ಮದುವೆಯಾಗಲೊಪ್ಪದ ಯುವತಿ ಮೇಲೆ ಭಗ್ನ ಪ್ರೇಮಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಜೀವಂತ ದಹನ ಮಾಡಿದ ಘಟನೆ ನಡೆದಿದೆ.
22 ವರ್ಷದ ಯುವತಿ ಘಟನೆಯಲ್ಲಿ ಸಾವನ್ನಪ್ಪಿದ್ದಾಳೆ. ಮನೆಯಲ್ಲಿ ತನ್ನ ಕೊಠಡಿಯಲ್ಲಿ ಮಲಗಿ ನಿದ್ರಿಸುತ್ತಿದ್ದ ಯುವತಿ ಮೇಲೆ ಯುವಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಪರಿಣಾಮ ಆಕೆ ತೀವ್ರ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾಳೆ.
ಯುವತಿಯನ್ನು ಆರೋಪಿ ಪ್ರೀತಿಸುತ್ತಿದ್ದ. ಮದುವೆಯಾಗುವಂತೆಯೂ ದಂಬಾಲು ಬಿದ್ದಿದ್ದ. ಆದರೆ ಯುವತಿ ಒಪ್ಪಿರಲಿಲ್ಲ. ಹೀಗಾಗಿ ಈ ಕೃತ್ಯಕ್ಕೆ ಮುಂದಾಗಿದ್ದಾನೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.
-Edited by Rajesh Patil