Select Your Language

Notifications

webdunia
webdunia
webdunia
webdunia

ಕೊಚ್ಚಿಯ ಸೌಮ್ಯಾ ರೇಪ್ ಆ್ಯಂಡ್ ಮರ್ಡರ್ ಆರೋಪಿ ಜೈಲಿನಿಂದ ತಪ್ಪಿಸಿ, ಬಾವಿಯಲ್ಲಿ ಅವಿತಿದ್ದ ಕಾಮುಕ

ಕೊಚ್ಚಿ ಸೌಮ್ಯಾ ಕೊಲೆ ಪ್ರಕರಣ

Sampriya

ಕೇರಳ , ಶುಕ್ರವಾರ, 25 ಜುಲೈ 2025 (15:42 IST)
Photo Credit X
ಕೇರಳ: ಕೊಚ್ಚಿಯ ಸೌಮ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿ ಜೈಲಿನಿಂದ ಪರಾರಿಯಾಗಿ ಬಾವಿಯೊಳಗೆ ಅವಿತು ಕೂತ ಘಟನೆ ನಡೆದಿದೆ. 

ಸೌಮ್ಯಾ ಅತ್ಯಾಚಾರ, ಕೊಲೆ ಪ್ರಕರಣದ ಅಪರಾಧಿ ಗೋವಿಂದಚಾಮಿ ಜೈಲಿನಿಂದ ಎಸ್ಕೇಪ್ ಆಗುವ ಮೂಲಕ 2011 ರ ಅಪರಾಧವನ್ನು ಮತ್ತೊಮ್ಮೆ ಗಮನಕ್ಕೆ ಬಂದಿದೆ. 

ಬೆಳಗಿನ ಜಾವ ತಪಾಸಣೆ ನಡೆಸುತ್ತಿದ್ದಾಗ ಜೈಲು ಅಧಿಕಾರಿಗಳಿಗೆ ಗೋವಿಂದಚಾಮಿ ನಾಪತ್ತೆಯಾಗಿರುವುದು ಕಂಡು ಬಂದಿದೆ. ಜೈಲು ಅಧಿಕಾರಿಗಳು ತಕ್ಷಣ ಜೈಲು ಆವರಣದ ಸುತ್ತಮುತ್ತ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಆತ ಎಲ್ಲಿಯೂ ಪತ್ತೆಯಾಗಲಿಲ್ಲ. ಸಿಸಿಟಿವಿ ದೃಶ್ಯವಾಳಿಗಳನ್ನು ಪರಿಶೀಲಿಸಿದಾಗ ಎಸ್ಕೇಪ್ ಆಗಿ ಹೊರಗಡೆ ಹೋಗುತ್ತಿರುವ ದೃಶ್ಯಗಳು ಸೆರೆಯಾಗಿದೆ. ಪೊಲೀಸರು ತೀವ್ರ ಹುಟುಕಾಟ ನಡೆಸಿದಾಗ ಬಾವಿಯೊಳಗೆ ಅಡಗಿ ಕುಳಿತಿದ್ದಾನೆ. 

ತಪ್ಪಿಸಿಕೊಳ್ಳುವ ಪ್ರಯತ್ನವು ಕೇರಳದ ಅತ್ಯಂತ ಭದ್ರವಾದ ಜೈಲುಗಳಲ್ಲಿ ಭದ್ರತಾ ಲೋಪಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಗೋವಿಂದರಾಜು 2011ರ ಫೆಬ್ರವರಿ 1ರಂದು ಕೊಚ್ಚಿಯ ಶಾಪಿಂಗ್ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ಸೇಲ್ಸ್ ಅಸಿಸ್ಟೆಂಟ್ ಸೌಮ್ಯಾ, ಎರ್ನಾಕುಲಂನಿಂದ ಶೋರನೂರ್‌ಗೆ ರೈಲಿನ ಮಹಿಳಾ ವಿಭಾಗದಲ್ಲಿ ಒಬ್ಬಂಟಿಯಾಗಿ ಪ್ರಯಾಣಿಸುತ್ತಿದ್ದರು.

ಪ್ರಯಾಣದ ವೇಳೆ ಗೋವಿಂದಚಾಮಿ ಆಕೆ ಇರುವ ಕೋಚ್‌ಗೆ ನುಗ್ಗಿ ಆಕೆಯ ಮೇಲೆ ಹಲ್ಲೆ ನಡೆಸಿ ವಲ್ಲತ್ತೋಲ್ ನಗರ ನಿಲ್ದಾಣದ ಬಳಿ ಚಲಿಸುತ್ತಿದ್ದ ರೈಲಿನಿಂದ ಹೊರಗೆ ತಳ್ಳಿದ್ದಾನೆ.

ನಂತರ ನಡೆದದ್ದು ಇನ್ನಷ್ಟು ಭಯಾನಕವಾಗಿತ್ತು. ಮನೋರಮಾ ಆನ್‌ಲೈನ್ ಪ್ರಕಾರ, ಗೋವಿಂದಚಾಮಿ ರೈಲಿನಿಂದ ಹಾರಿ, ಗಾಯಗೊಂಡ ಮಹಿಳೆ ಹಳಿಗಳ ಮೇಲೆ ಬಿದ್ದಿರುವುದನ್ನು ಕಂಡು ಮತ್ತೊಂದು ರೈಲು ಮಾರ್ಗದ ಬಳಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಹಲ್ಲೆ ನಡೆಸಿದ ಬಳಿಕ ಆಕೆಯ ಮೊಬೈಲ್ ಫೋನ್ ಹಾಗೂ ಪರ್ಸ್ ನಲ್ಲಿದ್ದ ನಗದು ಕದ್ದು ಪರಾರಿಯಾಗಿದ್ದಾನೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಜಸ್ಥಾನ ಸರ್ಕಾರ ಶಾಲೆ ಕಟ್ಟಡ ಕುಸಿದು 7 ಮಕ್ಕಳು ದುರ್ಮರಣ, ಇಬ್ಬರಿಗೆ ಗಂಭೀರ