Select Your Language

Notifications

webdunia
webdunia
webdunia
webdunia

ಪೊಲೀಸರಿಬ್ಬರ ನಕಲಿ ಎನ್‌ಕೌಂಟರ್‌: ಪಂಜಾಬ್‌ನ ನಿವೃತ್ತ ಪೊಲೀಸ್ ಅಧಿಕಾರಿಗೆ 10ವರ್ಷ ಕಠಿಣ ಜೈಲು ವಾಸ

ಪಂಜಾಬ್ ಪೊಲೀಸ್ ನಕಲಿ ಎನ್‌ಕೌಂಟರ್

Sampriya

ಚಂಡೀಗಢ , ಗುರುವಾರ, 24 ಜುಲೈ 2025 (20:01 IST)
ಚಂಡೀಗಢ: ಮೊಹಾಲಿಯ ಸಿಬಿಐ ನ್ಯಾಯಾಲಯವೊಂದು 1993ರ ನಕಲಿ ಎನ್‌ಕೌಂಟರ್ ಪ್ರಕರಣ ಸಂಬಂಧ ಪಂಜಾಬ್‌ನ ಪೊಲೀಸ್ ಅಧಿಕಾರಿಯೊಬ್ಬರಿಗೆ 10ವರ್ಷಗಳ ಕಠಿಣ ಜೈಲುವಾಸ ಹಾಗೂ %50 ಸಾವಿರ ದಂಡ ವಿಧಿಸಲಾಗಿದೆ. 

1993 ರಲ್ಲಿ ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ನಕಲಿ ಎನ್‌ಕೌಂಟರ್‌ ನಡೆಸಲಾಯಿತು.

ವಿಶೇಷ ಸಿಬಿಐ ನ್ಯಾಯಾಧೀಶ ಬಲ್ಜಿಂದರ್ ಸಿಂಗ್ ಸ್ರಾ ಅವರ ನ್ಯಾಯಾಲಯವು, ಅಮೃತಸರದ ಬಿಯಾಸ್‌ನ ಸ್ಟೇಷನ್ ಹೌಸ್ ಅಧಿಕಾರಿಯಾಗಿದ್ದ ಪರಮ್‌ಜಿತ್ ಸಿಂಗ್ ಅವರಿಗೆ 50,000 ರೂ. ದಂಡವನ್ನು ವಿಧಿಸಿತು. ಪರಮ್‌ಜಿತ್ ಸಿಂಗ್ (67) ಅವರು
ಪೊಲೀಸ್ ವರಿಷ್ಠಾಧಿಕಾರಿಯಾಗಿ ನಿವೃತ್ತರಾದರು.

ಬುಧವಾರದ ತನ್ನ ಆದೇಶದಲ್ಲಿ, ನ್ಯಾಯಾಲಯವು ಪ್ರಕರಣದಲ್ಲಿ ಇತರ ಮೂವರು ಆರೋಪಿಗಳಾದ - ಆಗಿನ ಇನ್ಸ್‌ಪೆಕ್ಟರ್ ಧರಂ ಸಿಂಗ್ (77), ಆಗಿನ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಕಾಶ್ಮೀರ್ ಸಿಂಗ್ (69) ಮತ್ತು ಆಗಿನ ಎಎಸ್‌ಐ ದರ್ಬಾರ ಸಿಂಗ್ (71) ಅವರನ್ನು ಖುಲಾಸೆಗೊಳಿಸಿತು.

ಮತ್ತೊಬ್ಬ ಆರೋಪಿ, ಆಗಿನ ಸಬ್ ಇನ್ಸ್‌ಪೆಕ್ಟರ್ ರಾಮ್ ಲುಭಯಾ ಪ್ರಕರಣದ ವಿಚಾರಣೆಯ ಸಮಯದಲ್ಲಿ ನಿಧನರಾದರು.

Share this Story:

Follow Webdunia kannada

ಮುಂದಿನ ಸುದ್ದಿ

ಕರಾವಳಿ ಭಾಗದಲ್ಲಿ ಭಾರೀ ಮಳೆಯ ಮುನ್ಸೂಚನೆ: ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ