ನವದೆಹಲಿ: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಇಂದು ರಾಜ್ಯ ರಾಜಕಾರಣದ ಬಗ್ಗೆ ಚರ್ಚಿಸಲು ದೆಹಲಿಗೆ ತೆರಳುತ್ತಿದ್ದಾರೆ. ಇಂದಾದ್ರೂ ಅವರು ರಾಹುಲ್ ಗಾಂಧಿ ಮೀಟ್ ಆಗ್ತಾರಾ ಎಂಬುದೇ ಸದ್ಯದ ಕುತೂಹಲ.
ಕಳೆದ ವಾರ ಸಿಎಂ ಮತ್ತು ಡಿಸಿಎಂ ದೆಹಲಿಯಲ್ಲೇ ಎರಡು ದಿನ ಬೀಡುಬಿಟ್ಟಿದ್ದರೂ ಇಬ್ಬರೂ ನಾಯಕರ ಭೇಟಿಗೆ ರಾಹುಲ್ ಗಾಂಧಿ ಸಮಯಾವಕಾಶ ನೀಡಿರಲಿಲ್ಲ. ಇದು ಬಿಜೆಪಿಯ ಟೀಕೆಗೂ ಗುರಿಯಾಗಿತ್ತು. ಸಿಎಂ ಬದಲಾವಣೆ ವಿವಾದ ತಾರಕಕ್ಕೇರಿದಾಗಲೇ ರಾಹುಲ್ ಭೇಟಿಗೆ ನಿರಾಕರಿಸಿದ್ದಕ್ಕೆ ಬಿಜೆಪಿ ಇನ್ನಿಲ್ಲದಂತೆ ವ್ಯಂಗ್ಯ ಮಾಡಿತ್ತು.
ಇದೀಗ ಮತ್ತೆ ಇಬ್ಬರೂ ನಾಯಕರು ದೆಹಲಿಗೆ ತೆರಳುತ್ತಿದ್ದಾರೆ. ದೆಹಲಿಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಜೊತೆ ನಿಗಮ ಮಂಡಳಿಗಳಿಗೆ ನೇಮಕ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಈ ಬಾರಿಯೂ ಅವರಿಗೆ ರಾಹುಲ್ ಗಾಂಧಿ ಸಿಗುವ ಸಾಧ್ಯತೆ ಕಡಿಮೆ. ಯಾಕೆಂದರೆ ಇದೀಗ ಪಾರ್ಲಿಮೆಂಟ್ ಸೆಷನ್ ನಡೆಯುತ್ತಿದ್ದು ಅಲ್ಲಿ ಸರ್ಕಾರದ ವಿರುದ್ಧ ಹೋರಾಟದಲ್ಲಿ ರಾಹುಲ್ ಬ್ಯುಸಿಯಾಗಿದ್ದಾರೆ. ಹೀಗಾಗಿ ಇಂದು ಅವರು ಸಿಎಂ ಮತ್ತು ಡಿಸಿಎಂ ಭೇಟಿ ಮಾಡುವುದು ಅನುಮಾನವೆನ್ನಲಾಗಿದೆ.