ತೆಲಂಗಾಣ: ಹೈದರಾಬಾದ್‌ನಲ್ಲಿ ಫ್ರಿಡ್ಜ್‌ನಲ್ಲಿಟ್ಟ ಮಾಂಸ ಸೇವಿಸಿ, 7ಮಂದಿ ಅಸ್ವಸ್ಥಗೊಂಡು, ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ವನಸ್ಥಲಿಪುರಂ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.
ಜುಲೈ 20ರಂದು ತಮ್ಮ ನಿವಾಸದಲ್ಲಿ ಬೋನಾಲು ಹಬ್ಬವನ್ನು ಆಚರಿಸಿದ ಕುಟುಂಬವು ಮರುದಿನ ಫ್ರಿಡ್ಜ್‌ನಲ್ಲಿ ಶೇಖರಿಸಿಟ್ಟ ಚಿಕನ್ ಮತ್ತು ಬೋಟಿಯನ್ನು ಮತ್ತೆ ಬಿಸಿ ಮಾಡಿ ಸೇವಿಸಿದ್ದಾರೆ.
ಹಳಸಿದ ಆಹಾರವನ್ನು ಸೇವಿಸಿದ ನಂತರ, ಎಲ್ಲ ಕುಟುಂಬ ಸದಸ್ಯರು ತೀವ್ರ ವಾಂತಿ ಮತ್ತು ಭೇದಿಯಿಂದ ಬಳಲುತ್ತಿದ್ದರು ಎಂದು ಇನ್ಸ್‌ಪೆಕ್ಟರ್ ಹೇಳಿದ್ದಾರೆ.
ತಾರ್ನಾಕದ ಆರ್‌ಟಿಸಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದರೂ ಅವರ ಸ್ಥಿತಿ ಹದಗೆಟ್ಟಿದ್ದು, ಎಂಟು ಸದಸ್ಯರನ್ನು ಚಿಂತಲಕುಂಟಾದ ಹಿಮಾಲಯ ಆಸ್ಪತ್ರೆಗೆ ಜುಲೈ 22 ರಂದು ಸ್ಥಳಾಂತರಿಸಲಾಯಿತು.
ಮೃತರನ್ನು 46 ವರ್ಷದ ಕಂಡಕ್ಟರ್ ಶ್ರೀನಿವಾಸ್ ಯಾದವ್ ಎಂದು ಗುರುತಿಸಲಾಗಿದೆ.