Select Your Language

Notifications

webdunia
webdunia
webdunia
webdunia

ಕೊನೆಗೂ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆರಂಭದ ಭಾಗ್ಯ!

ಕೊನೆಗೂ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆರಂಭದ ಭಾಗ್ಯ!
ಕೊಚ್ಚಿ , ಬುಧವಾರ, 29 ಆಗಸ್ಟ್ 2018 (09:42 IST)
ಕೊಚ್ಚಿ: ತೀವ್ರ ಮಳೆಯಿಂದಾಗಿ ಜಲಪ್ರಳಯವಾಗಿ ಇದೇ ಮೊದಲ ಬಾರಿಗೆ ಸುದೀರ್ಘ ಕಾಲದವರೆಗೆ ಸ್ಥಗಿತಗೊಂಡಿದ್ದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊನೆಗೂ ಆರಂಭದ ಭಾಗ್ಯ ದೊರಕಿದೆ.

15 ದಿನಗಳ ಸುದೀರ್ಘ ಬಿಡುವಿನ ನಂತರ ಇಂದು ಕೊಚ್ಚಿ ವಿಮಾನ ನಿಲ್ದಾಣಕ್ಕೆ ಹಾರಾಟಕ್ಕೆ ಸಜ್ಜಾಗಿದ್ದು, ಮಧ್ಯಾಹ್ನ 2 ಗಂಟೆಗೆ ಮೊದಲ ವಿಮಾನ ಹಾರಾಟ ನಡೆಸಲಿದೆ.

ಮಳೆಯಿಂದಾಗಿ ವಿಮಾನ ನಿಲ್ದಾಣದ ತುಂಬಾ ನೀರು ಆವರಿಸಿದ್ದರಿಂದ ವಿಮಾನ ಹಾರಾಟ ಸ್ಥಗಿತಗೊಂಡಿತ್ತು. ಇದಕ್ಕೂ ಮೊದಲು ಆಗಸ್ಟ್ 26 ಕ್ಕೇ ವಿಮಾನ ಹಾರಾಟ ಪುನರಾರಂಭವಾಗುವುದಾಗಿ ಸುದ್ದಿಯಿತ್ತು. ಆದರೆ ಸಿಬ್ಬಂದಿ ವರ್ಗದವರು ಕರ್ತವ್ಯಕ್ಕೆ ಹಾಜರಾಗದೇ ಇದ್ದಿದ್ದರಿಂದ ಮತ್ತು ತೆರವು ಕಾರ್ಯ ಆಗದೇ ಇದ್ದಿದ್ದರಿಂದ ಮೂರು ದಿನ ತಡವಾಗಿ ಆರಂಭವಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಭೀಕರ ಕಾರು ಅಪಘಾತದಲ್ಲಿ ಎನ್ ಟಿಆರ್ ಪುತ್ರ, ನಟ ಹರಿಕೃಷ್ಣ ಸಾವು