Select Your Language

Notifications

webdunia
webdunia
webdunia
webdunia

ಹೊಸ ಟ್ರೆಂಡ್ ಹುಟ್ಟು ಹಾಕಿದ ಕಾಂಗ್ರೆಸ್ ಸಂಸದ ಶಶಿ ತರೂರ್! ಕಾರಣವೇನು ಗೊತ್ತಾ?

ಶಶಿ ತರೂರ್
ನವದೆಹಲಿ: ತಿರುವನಂತಪುರಂ ಕಾಂಗ್ರೆಸ್ ಸಂಸದ ಶಶಿ ತರೂರ್ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿದ್ದವರು. ಆದರೆ ಇದೀಗ ಹೊಸದೊಂದು ಟ್ರೆಂಡ್ ಹುಟ್ಟು ಹಾಕುವ ಮೂಲಕ ಸುದ್ದಿಯಲ್ಲಿದ್ದಾರೆ.

ಟ್ವಿಟರ್ ನಲ್ಲಿ ‘ಪ್ರೌಡ್ ಟು ಬಿ ಮಲಯಾಳಿ’ ಎಂಬ ಹೊಸ ಟ್ರೆಂಡ್ ಗೆ ಶಶಿ ತರೂರ್ ಚಾಲನೆ ನೀಡಿದ್ದಾರೆ. ಅಷ್ಟಕ್ಕೂ ತರೂರ್ ಯಾಕೆ ಇಂತಹದ್ದೊಂದು ಅಭಿಯಾನ ಆರಂಭಿಸಿದ್ದಾರೆ ಗೊತ್ತಾ?

ಕೇರಳ ಪ್ರವಾಹಕ್ಕೆ ದುಬೈ ಸರ್ಕಾರ 700 ಕೋಟಿ ರೂ. ಸಹಾಯ ಮಾಡಲು ಸಿದ್ಧವಾಗಿತ್ತು ಎಂಬ ಸುದ್ದಿ ಸುಳ್ಳು ಎಂದು ಗೊತ್ತಾದ ಮೇಲೆ ಆಂಗ್ಲ ಖಾಸಗಿ ವಾಹಿನಿಯೊಂದು ಈ ಬಗ್ಗೆ ಚರ್ಚಾ ಕಾರ್ಯಕ್ರಮ ಏರ್ಪಡಿಸಿತ್ತು. ಇದರಲ್ಲಿ ಸುದ್ದಿವಾಚಕ ಕೆಲವು ಮಲಯಾಳಿಗಳು ನಾಚಿಕೆಗೇಡಿನವರು ಎಂದಿದ್ದರು. ಇದನ್ನು ಪ್ರತಿಭಟಿಸಿ ತರೂರ್ ಇಂತಹದ್ದೊಂದು ಅಭಿಯಾನ ಶುರು ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಸದಾ ತನ್ನ ಮೇಲೆ ಕೆಂಡ ಕಾರುವ ಆರ್ ಎಸ್ಎಸ್ ಗೆ ರಾಹುಲ್ ಗಾಂಧಿಗೆ ಆಹ್ವಾನ?!