Select Your Language

Notifications

webdunia
webdunia
webdunia
webdunia

ಕೇರಳ: ರೈಲ್ವೆ ಹಳಿಯಲ್ಲಿ ಛಿದ್ರಛಿದ್ರವಾದ ಸ್ಥಿತಿಯಲ್ಲಿ ಮೂವರು ಮಹಿಳೆಯರ ಮೃತದೇಹ ಪತ್ತೆ

ಕೇರಳ: ರೈಲ್ವೆ ಹಳಿಯಲ್ಲಿ ಛಿದ್ರಛಿದ್ರವಾದ ಸ್ಥಿತಿಯಲ್ಲಿ ಮೂವರು ಮಹಿಳೆಯರ ಮೃತದೇಹ ಪತ್ತೆ

Sampriya

ಕೊಟ್ಟಾಯಂ , ಶುಕ್ರವಾರ, 28 ಫೆಬ್ರವರಿ 2025 (11:57 IST)
Photo Courtesy X
ಕೊಟ್ಟಾಯಂ: ಎಟ್ಟುಮನೂರ್ ಬಳಿಯ ರೈಲ್ವೆ ಹಳಿಯಲ್ಲಿ ಒಬ್ಬ ಮಹಿಳೆ ಹಾಗೂ ಇಬ್ಬರು ಬಾಲಕಿಯರ ಮೃತದೇಹ ಪತ್ತೆಯಾಗಿದೆ.

ಪಾರೋಲಿಕಲ್ ರೈಲ್ವೆ ಗೇಟ್ ಬಳಿ ಘಟನೆ ನಡೆದಿದೆ. ಮೃತ ಮೂವರ ಗುರುತು ಪತ್ತೆಯಾಗಿಲ್ಲ. ಅವರು ವಲಸಿಗರು ಎಂದು ಶಂಕಿಸಲಾಗಿದೆ.

ಶುಕ್ರವಾರ ಬೆಳಗ್ಗೆ ರೈಲ್ವೆ ಗೇಟ್ ಬಳಿ ಶವಗಳ ಅವಶೇಷಗಳನ್ನು ಸ್ಥಳೀಯರು ಪತ್ತೆ ಮಾಡಿದ್ದಾರೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಎಟ್ಟುಮನೂರು ಪೊಲೀಸರು ಹಾಗೂ ರೈಲ್ವೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಮೂವರ ದೇಹಗಳು ಗುರುತು ಹಿಡಿಯಲಾಗದ ಸ್ಥಿತಿಯಲ್ಲಿವೆ. ಕಾಲುಗಳು ಮತ್ತು ಬಟ್ಟೆಗಳ ಅವಶೇಷಗಳ ಪ್ರಕಾರ ಮೃತದೇಹಗಳು ಇಬ್ಬರು ಹುಡುಗಿಯರು ಮತ್ತು ಮಹಿಳೆಯೆಂದು ಪೊಲೀಸರು ತೀರ್ಮಾನಿಸಿದ್ದಾರೆ.

ಅವರು ಕೊಟ್ಟಾಯಂ-ನಿಲಂಬೂರ್ ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿಯಾಗುವ ಸಾಧ್ಯತೆಯಿದೆ. ರೈಲು ಬೆಳಗ್ಗೆ 5.20ಕ್ಕೆ ಅಪಘಾತ ನಡೆದ ಸ್ಥಳವನ್ನು ತಲುಪಿತು.

Share this Story:

Follow Webdunia kannada

ಮುಂದಿನ ಸುದ್ದಿ

ಎಟಿಎಂನಲ್ಲಿ ಬೆಂಕಿ ಅವಘಡ: ನೋಡ ನೋಡುತ್ತಿದ್ದ ಹಾಗೇ ಲಕ್ಷಾಂತರ ರೂಪಾಯಿ ಬೆಂಕಿಗಾಹುತಿ