Select Your Language

Notifications

webdunia
webdunia
webdunia
webdunia

ಬಸ್‌ನಲ್ಲಿ ಮಹಿಳೆಯ ರೇಪ್‌: ಶಿರೂರಿನಲ್ಲಿ ಪೊಲೀಸರು ಬೀಸಿದ ಬಲೆಗೆ ಬಿದ್ದ ಕಾಮಕ

ಬಸ್‌ನಲ್ಲಿ ಮಹಿಳೆಯ ರೇಪ್‌: ಶಿರೂರಿನಲ್ಲಿ ಪೊಲೀಸರು ಬೀಸಿದ ಬಲೆಗೆ ಬಿದ್ದ ಕಾಮಕ

Sampriya

ಮುಂಬೈ , ಶುಕ್ರವಾರ, 28 ಫೆಬ್ರವರಿ 2025 (10:28 IST)
ಮುಂಬೈ: ನಿಂತಿದ್ದ ಬಸ್‌ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿ ದತ್ತಾತ್ರಯ ರಾಮದಾಸ್ ಗಾಡೆ (36) ಎಂಬಾತ ಕೊನೆಗೂ ಪೊಲೀಸ್‌ ಬಲೆಗೆ ಬಿದ್ದಿದ್ದಾನೆ

ಪುಣೆಯ ಸ್ವಾರ್‌ಗೇಟ್ ಬಸ್ ಡಿಪೋದಲ್ಲಿ 26 ವರ್ಷದ ಮಹಿಳೆಯ ಮೇಲೆ ರಾಮ್‌ದಾಸ್‌ ಎರಗಿದ್ದ.  ಆತನನ್ನು ಶಿರೂರು ತಹಸಿಲ್‌ನಲ್ಲಿ ಗುರುವಾರ ಮಧ್ಯರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಪತ್ತೆಗೆ ಪುಣೆ ಪೊಲೀಸರು ಡ್ರೋನ್‌ಗಳು ಮತ್ತು ಶ್ವಾನದಳವನ್ನು ಗುಣತ್ ಗ್ರಾಮ ಮತ್ತು ಚಿಂಚ್ನಿ ಅಣೆಕಟ್ಟಿನ ಹಿನ್ನೀರಿನ ಉದ್ದಕ್ಕೂ ನಿಯೋಜಿಸಿದ್ದರು. ಅಲ್ಲದೆ, ಆರೋಪಿ ಬಗ್ಗೆ ಸುಳಿವು ನೀಡುವವರಿಗೆ ₹1 ಲಕ್ಷ ಬಹುಮಾನ ಘೋಷಿಸಲಾಗಿತ್ತು.

ಶಿರೂರು ತಹಸಿಲ್‌ನ ಗುಣತ್ ಗ್ರಾಮದ ಸಮೀಪದಲ್ಲಿ ಪುಣೆ ಸಿಟಿ ಪೊಲೀಸರು, ಪುಣೆ ಗ್ರಾಮಾಂತರ ಪೊಲೀಸರು ಮತ್ತು ಸಿಐಡಿ ಅಪರಾಧ ವಿಭಾಗದ ತಂಡಗಳ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. ಸ್ಥಳೀಯ ಗ್ರಾಮಸ್ಥರು ಕೂಡ ಆರೋಪಿಯನ್ನು ಹಿಡಿಯಲು ಪೊಲೀಸ್ ತಂಡಕ್ಕೆ ಸಹಾಯ ಮಾಡಿದ್ದಾರೆ.

ಬುಧವಾರ ಬೆಳಿಗ್ಗೆ 5.30ರ ಸುಮಾರಿಗೆ ಸಂತ್ರಸ್ತೆಯು ಪುಣೆಯಿಂದ ಸತಾರಾ ಜಿಲ್ಲೆಯ ಫಾಲ್ತಾನ್‌ಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದರು. ಮಹಿಳೆಯ ಬಳಿಗೆ ಬಂದ ಆರೋಪಿ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಬಸ್ ಬಂದಿದೆ ಎಂದು ಹೇಳಿ, ಅವರನ್ನು ನಿರ್ಜನ ಸ್ಥಳದಲ್ಲಿ ನಿಲ್ಲಿಸಿದ್ದ ಖಾಲಿ ಬಸ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳಂಬೆಳಿಗ್ಗೆ ನೇಪಾಳದಲ್ಲಿ ಕಂಪಿಸಿದ ಭೂಮಿ: ಭಾರತ-ಚೀನಾ ಗಡಿಯಲ್ಲಿ ಹೆಚ್ಚಿದ ಆತಂಕ